ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಷ್ಟ್ರಧ್ವಜ ನಿತ್ಯ ಹಾರಿಸಿ'

Rashmi Kasaragodu
Updated On : 8 Aug 2013, 12:05 pm

ಹಾಸನ: ಗ್ರಾಪಂ ಮತ್ತು ತಾಪಂ ಕಚೇರಿಗಳಲ್ಲಿ ಪ್ರತಿದಿನ ರಾಷ್ಟ್ರಧ್ವಜ ಹಾರಿಸುವುದನ್ನು ಕಡ್ಡಾಯಗೊಳಿಸಿರುವ ಹಿನ್ನೆಲೆಯಲ್ಲಿ ಹಾಸನ ತಾಲೂಕಿನ ಎಲ್ಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಬುಧವಾರ ಹಾಸನ ತಾಲೂಕು ಪಂಚಾಯ್ತಿ ಕಚೇರಿ ಆವರಣದಲ್ಲಿ ತರಬೇತಿ ನೀಡಲಾಯಿತು.ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಸಿ.ದೇವರಾಜೇಗೌಡ ಅವರ ಅಧ್ಯಕ್ಷತೆಯಲ್ಲಿ ಭಾರತ ಸೇವಾದಳದ ಜಿಲ್ಲಾ ಸಂಚಾಲಕ ಮಹೇಶ್ ಅವರು ಕಚೇರಿಗಳಲ್ಲಿ ಪ್ರತಿದಿನ ರಾಷ್ಟಧ್ವಜವನ್ನು ಹಾರಿಸುವ ಬಗ್ಗೆ ವಿವರವಾಗಿ ತರಬೇತಿಯನ್ನು ನೀಡಿದರು.
ಇಂದು ಕೆಡಿಪಿ ಸಭೆ
ಸಕಲೇಶಪುರ: ತಾಲೂಕು ಪಂಚಾಯ್ತಿ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಆ. 8 ರಂದು ಬೆಳಗ್ಗೆ 11 ಕ್ಕೆ ತಾಲೂಕು ಪಂಚಾಯ್ತಿ   ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಜರುಗಲಿದೆ ಎಂದು ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.    
ವಿದ್ಯಾರ್ಥಿ ವೇತನ
ಹಾಸನ: ಪ್ರಸಕ್ತ ಸಾಲಿಗೆ ಮುಸ್ಲಿಂ, ಕ್ರಿಶ್ಚಿಯನ್, ಬೌದ್ದ, ಪಾರ್ಸಿ, ಸಿಖ್, ಜೈನ್, ಮತೀಯ ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರು ಮಾಡುವ ಸಲುವಾಗಿ ಅರ್ಜಿಗಳನ್ನು ಸಲ್ಲಿಸಲು ಆಗಸ್ಟ್ 17ರವರೆಗೆ ಸ್ವೀಕರಿಸಲು ವಿಸ್ತರಿಸಲಾಗಿದೆ. ಎಲ್ಲಾ ಶಾಲಾ ಮುಖ್ಯೋಪಾಧ್ಯಾಯರು ನಿಗದಿತ ದಿನಾಂಕದೊಳಗೆ ಈ ಕಚೇರಿಯ ಉರ್ದು ಸಿ.ಆರ್.ಪಿ. ಅವರ ಹಸ್ತ ಅರ್ಜಿಗಳನ್ನು ತಲುಪಿಸಬೇಕೆಂದು ಬೇಲೂರು ತಾಲೂಕಿನ ಬಿಇಓ ಸುಂದ್ರೇಶ್ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement