ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೋಟರಿ ಕ್ವಾಂಟ, ರೋಟರಿ ಸನ್ರೈಸ್ ಸಂಯೋಜಿತ ವಿಶ್ವ ಸ್ನೇಹ ದಿನಾಚರಣೆ

Rashmi Kasaragodu
Updated On : 8 Aug 2013, 12:09 pm

ಕನ್ನಡಪ್ರಭ ವಾರ್ತೆ೤ ಹಾಸನ೤ ಆ. 7
ನಗರದ ರೋಟರಿ ಕ್ವಾಂಟ ಮತ್ತು ರೋಟರಿ ಸನ್ರೈಸ್ ಸಂಸ್ಥೆಗಳ ಆಶ್ರಯದಲ್ಲಿ ನಗರದ ಭಾರತಿ ಕಲ್ಯಾಣ ಮಂಟಪದಲ್ಲಿ ಅಂತಾರಾಷ್ಟ್ರೀಯ ಸ್ನೇಹ ದಿನ ಆಚರಿಸಲಾಯಿತು.
ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಆದಿ ಮಾನವ ನಾಗರಿಕತೆ ಎಡೆಗೆ ಬಂದಿದ್ದೇ ಸ್ನೇಹ ಎಂಬ ಸಂಬಂಧದಿಂದ. ಪ್ರತಿ ಸಂಘ ಸಂಸ್ಥೆಗಳನ್ನು ಸ್ಥಾಪಿಸುವ ಉದ್ದೇಶ ಸಮಾಜ ಕಟ್ಟುವ ಮಹತ್ತರ ಉದ್ದೇಶದಿಂದ. ಕೇವಲ ಒಬ್ಬ ಸಾಮಾನ್ಯ ಮನುಷ್ಯನ ಯೋಚನೆಯಿಂದ ಸಮಾಜ ದಲ್ಲಿ ಬದಲಾವಣೆ ಸಾಧ್ಯವಿಲ್ಲ.
ಒಬ್ಬ ವೈಚಾರಿಕ ವ್ಯಕ್ತಿಯ ಯೋಚನೆ ಗಳಿಂದ ಸಾಧ್ಯ. ಇಂತಹ ವೈಚಾರಿಕ ವ್ಯಕ್ತಿಗಳು ಸೇರಿ ಸಮಾಜದಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಬಹುದು. ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಸಮಾಜ ಕಟ್ಟುವಲ್ಲಿ ಬಹು ದೊಡ್ಡ ಕಾಣಿಕೆಯನ್ನು ಮಾನವ ಕುಲಕ್ಕೆ ಕೊಡಬಹುದು ಎಂದರು.
ರೋಟರಿ ಸಹಾಯಕ ಗೌರ್ನರ್ ರಮೇಶ್ ಮಾತನಾಡಿದರು. ಡಾ.ಪ್ರೀತಿ ಮೋಹನ್ ಸ್ನೇಹ ದಿನದ ಮಹತ್ವ, ಅದು ಹೇಗೆ ಆಚರಣೆಗೆ ಬಂತು ಎಂಬುದರ ಬಗ್ಗೆ ವಿವರಣೆ ನೀಡಿದರು.
ರೋಟರಿ ಸನ್ರೈಸ್ ಅಧ್ಯಕ್ಷ ನಟೇಶ್ ರೋಟರಿ ಕ್ವಾಂಟ ಕ್ಲಬ್ಗಳು ಜೊತೆಯಾಗಿ ಭವಿಷ್ಯದಲ್ಲಿ ಹಮ್ಮಿ ಕೊಂಡಿರುವ ಕಾರ್ಯಕ್ರಮಗಳ ವಿವರಣೆ ನೀಡಿದರು. ಎಚ್.ಜೆ.ಜಿತೇಂದ್ರ ಸ್ವಾಗತಿಸಿದರು. ಅಮೃತಕುಮಾರ್ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement