ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೀರಶೈವ ಸಮಾಜಕ್ಕೆ ಸರಿ ದಿಕ್ಕು ತೋರುವಲ್ಲಿ ವಿಫಲ: ಬಿ.ಬಿ. ಶಿವಪ್ಪ

Rashmi Kasaragodu
Updated On : 8 Aug 2013, 12:08 pm

ಬೇಲೂರು: ವೀರಶೈವ ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವಲ್ಲಿ ವಿಫಲರಾಗಿದ್ದೇವೆ ಎಂದು ವಿಧಾನಪರಿಷತ್ ಸದಸ್ಯರಾದ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾ ಹಾಗೂ ತಾಲೂಕು ವೀರಶೈವ ನೌಕರರ ಸಂಘ, ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ವೀರಶೈವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ಭಾವನೆಗಳಲ್ಲಿ ಒಂದಿಷ್ಟಾದರೂ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾದರೆ ಬದುಕಿಗೆ ಅರ್ಥವಿಲ್ಲ. ವಿದ್ಯಾರ್ಥಿ ಜೀವನ ಸಂತುಷ್ಟ, ಸಂತೃಪ್ತಿ ಜೀವನ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಅರಕಲಗೂಡು ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನಸ್ವಾಮೀಜಿ ಮಾತನಾಡಿದರು.
ಪುಷ್ಪಗಿರಿಯ ಸೋಮಶೇಖರಸ್ವಾಮೀಜಿ ಮಾತನಾಡಿ, ಪ್ರತಿಭೆ ಇರುವವರು ಸತ್ಯ ಹುಡುಕುತ್ತ ಸಾಗಬೇಕಿದೆ. ಮಕ್ಕಳನ್ನು ಮುದ್ದುಮಾಡಿ ಸಾಕಿದಾಕ್ಷಣ ಸಂಸ್ಕೃತಿ ಕಲಿಯುವುದಿಲ್ಲ. ಅದನ್ನು ಪೋಷಕರು, ಗುರುಗಳು ಕಲಿಸಬೇಕಿದೆ ಎಂದು ಹೇಳಿದರು.
ಚಿಕ್ಕಮಗಳೂರಿನ ಬಸವಮಂದಿರದ ಜಯಬಸವಾನಂದ ಸ್ವಾಮೀಜಿ ಮಾತನಾಡಿದರು. 40 ಜನ ಸರ್ಕಾರಿ ನೌಕರರು ಹಾಗೂ ಎಸ್ಸೆಸ್ಸೆಲ್ಸಿ   ಹಾಗೂ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಗೌರವಿಸಲಾಯಿತು. ಪೃಥ್ವಿ ಆಕರ್ಷಕ ಭರತನಾಟ್ಯ ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ಜಿಲ್ಲಾ ವೀರಶೈವ ನೌಕರರ ಸಂಘದ ಅಧ್ಯಕ್ಷ ಯು.ಎಸ್.ಬಸವರಾಜು ಮಾತನಾಡಿದರು. ಅಧ್ಯಕ್ಷತೆ ತಾಲೂಕು ನೌಕರರ ಸಂಘದ ಅಧ್ಯಕ್ಷ ಶಾಂತೇಗೌಡ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement