ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 10 ರಂದು ಮಕ್ಕಳಿಗೆ ನಾನಾ ಸ್ಪರ್ಧೆ
ಹಾಸನ: ಹೇಮಾವತಿ ಮಹಿಳಾ ಸಂಘದ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ.10 ರಂದು ಶಾಲಾ ಮಕ್ಕಳಿಗೆ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಒಂದು ಶಾಲೆಯಿಂದ 5 ಮಂದಿ ಮಕ್ಕಳನ್ನು ಸ್ಪರ್ಧೆಗೆ ಕಳುಹಿಸಬಹುದಾಗಿದೆ. ಸ್ಪರ್ಧೆಗಳು ಅಂದು ಮಧ್ಯಾಹ್ನ 2 ಕ್ಕೆ ಕೆ.ಆರ್. ಪುರಂನಲ್ಲಿರುವ ರಾಮಕೃಷ್ಣ ವಿದ್ಯಾಲಯ (ಹೋಲಿಮದರ್) ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. 1 ರಿಂದ 4 ನೇ ತರಗತಿ ಮಕ್ಕಳಿಗೆ ರಾಷ್ಟ್ರೀಯ ನಾಯಕರ ವೇಷಭೂಷಣ ಸ್ಪರ್ಧೆ, 5 ರಿಂದ 7 ನೇ ತರಗತಿ ಮಕ್ಕಳಿಗೆ ರಾಷ್ಟ್ರ ಧ್ವಜದ ಚಿತ್ರ ಬಿಡಿಸುವುದು ಮತ್ತು 8 ರಿಂದ 10 ನೇ ತರಗತಿ ಮಕ್ಕಳಿಗೆ ದೇಶ ಭಕ್ತಿಗೀತೆ ಸ್ಪರ್ಧ್ಧೆಗಳು ನಡೆಯಲಿವೆ. ವಿಜೇತ ಮಕ್ಕಳಿಗೆ ಅಂದೇ ಬಹುಮಾನ ವಿತರಿಸಲಾಗುವುದು.