ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉದ್ಯೋಗ ವಿನಿಮಯ ಕೇಂದ್ರ: 287 ನೋಂದಣಿ

Rashmi Kasaragodu
Updated On : 9 Aug 2013, 12:20 pm

ಹಾಸನ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಕಳೆದ ಜುಲೈ ಮಾಹೆಯಲ್ಲಿ ಉದ್ಯೋಗ ಬಯಸಿ 287 ಉದ್ಯೋಗಾಕಾಂಕ್ಷಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿದ್ದಾರೆ ಎಂದು ಉದ್ಯೋಗ ಅಧಿಕಾರಿ ಜೆ.ಬಿ.ವಿಜಯಲಕ್ಷ್ಮಿ ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿಗಿಂತ ಕಡಿಮೆ ವಿದ್ಯಾರ್ಹತೆಯುಳ್ಳ 25 ಮಂದಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಹತೆ ಪಡೆದಿರುವ 167 ಅಭ್ಯರ್ಥಿಗಳು, ಪದವೀಧರರು 27 ಹಾಗೂ ತಾಂತ್ರಿಕ  ವಿದ್ಯಾರ್ಹತೆ ಪಡೆದ 68 ಅಭ್ಯರ್ಥಿಗಳು ಸೇರಿದಂತೆಒಟ್ಟು 287 ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದಾರೆ.
ಮಾಸಾಂತ್ಯಕ್ಕೆ ಪರಿಶಿಷ್ಟ ಜಾತಿ 964, ಪರಿಶಿಷ್ಟ ಪಂಗಡದ 138 ಹಾಗೂ ಅಂಗವಿಕಲರು 458 ಮಂದಿ ಸೇರಿದಂತೆ ಒಟ್ಟು 13260 ಅಭ್ಯರ್ಥಿಗಳು ಜೀವ ದಾಖಲೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಕೌಟ್ಸ್, ಗೈಡ್ಸ್ನಿಂದ ವನ ಮಹೋತ್ಸವ
ಹಾಸನ: ಸಮುದಾಯ ಸೇವೆಯನ್ನೇ ತನ್ನ ಧ್ಯೇಯವಾಗಿಸಿಕೊಂಡಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಇತ್ತೀಚೆಗೆ ನಗರದ ಜಿಲ್ಲಾ ಕ್ರೀಡಾಂಗಣದ ಸುತ್ತಲ ಪರಿಸರದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.   ಎಂಟಿಎಸ್ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಸ್ಕೌಟ್ಸ್ ಮುಖ್ಯ ಆಯುಕ್ತ ಡಾ.ವೈ.ಎಸ್.ವೀರಭದ್ರಪ್ಪ ಪರಿಸರ ಸಂರಕ್ಷಣೆ ಎಲ್ಲರ ಮುಖ್ಯ ಕರ್ತವ್ಯವಾಗಿದೆ. ಆದರೆ ನಗರೀಕರಣದಿಂದ ಎಲ್ಲಿ ನೋಡಿದರು ಸಿಮೆಂಟ್ ಕಟ್ಟಡಗಳೆ ತಲೆ ಎತ್ತಿದ್ದು ಇದರಿಂದ ಪರಿಸರಕ್ಕೆ ಮಾರಕವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮೋಹನ್ ಕುಮಾರ್, ಹಂಗರಹಳ್ಳಿ ಭೀಮನಾಯಕ್ ,ಕೆಎಸ್ಆರ್ಪಿ ಪೇದೆ ವೈ.ಬಿ.ಕಾಂತರಾಜು, ಸ್ವಾಗತ್ ,ಧರ್ಮ, ಪ್ರವೀಣ್, ಪ್ರಿಯಾ, ಹರ್ಷಿತಾ, ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು.
ಪದಾಧಿಕಾರಿಗಳ ಆಯ್ಕೆ
ಆಲೂರು: ರಾಜ್ಯ ಸರ್ಕಾರಿ ನೌಕರರ ಸಂಘದ ತಾ. ಅಧ್ಯಕ್ಷರಾಗಿ ಡಿ.ಎಂ. ವರದರಾಜು ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಡಿ.ಎಮ್. ವರದರಾಜು ಅಧ್ಯಕ್ಷರಾದರೆ, ಜಾನುವಾರು ಅಧಿಕಾರಿ, ರಾಜ್ಯ ಪರಿಷತ್ ಸದಸ್ಯ ಬಿ.ಎಸ್. ಧರ್ಮಪ್ಪ, ಖಜಾಂಚಿಯಾಗಿ ಕೃಷಿ ಇಲಾಖೆಯ ಶಿವಾನಂದ್ ಆಯ್ಕೆಗೊಂಡರು. ನಿರ್ದೇಶಕರಾಗಿ ಶಿಕ್ಷಕರಾದ ಧರ್ಮೇಶ್, ಇ.ಸಿ. ಚಂದ್ರು ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement