ವೀರ ಯೋಧರಿಗೆ ಮಾಜಿ ಸೈನಿಕರಿಂದ ಶ್ರದ್ಧಾಂಜಲಿ
ಕ.ಪ್ರ.ವಾರ್ತೆ ಹಾಸನ ಆ. 8
ಪಾಕಿಸ್ತಾನದ ಸೇನೆಯಿಂದ ಹತ್ಯೆಯಾದ ಭಾರತೀಯ ವೀರ ಯೋಧರಿಗೆ ಮಾಜಿ ಸೈನಿಕರಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಪ್ರಭಾಕರ್ ಮಾತನಾಡಿ, ಪಾಕಿಸ್ತಾನದ ಸೇನೆಯಿಂದ ಇಂತಹ ಕೃತ್ಯಗಳು ಹಲವು ಬಾರಿ ನಡೆಯುತ್ತಲೇ ಇವೆ ಎಂದು ಆತಂಕವ್ಯಕ್ತಪಡಿಸಿದರು.
ವೀರ ಸೈನಿಕರು ಮಡಿದ ಮೇಲೆ ಸರ್ಕಾರ ನೀಡುವ ಪರಿಹಾರ ಅವರ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತದೆ. ಒಬ್ಬ ಸೈನಿಕನಿಗೆ ಕನಿಷ್ಠ 50 ಲಕ್ಷ ರು. ಗಳಾದರೂ ಕೊಡಬೇಕೆಂದು ಒತ್ತಾಯಿಸಿದರು.
ಸೈನಿಕನಾದವನಿಗೆ ಮುಖ್ಯವಾಗಿ ನೈತಿಕ ಬೆಂಬಲ ನೀಡಿದರೆ ಪಾಕ್ ಉಗ್ರಗಾಮಿಗಳಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಸಲಹೆ ನೀಡಿದರು.
ಎರಡು ನಿಮಿಷ ಮೌನ ಆಚರಿಸಿ ಮಡಿದ ವೀರ ಯೋಧರ ಭಾವ ಚಿತ್ರಕ್ಕೆ ಅರ್ಪಿಸಿದರು.
ಈ ವೇಳೆ ಸಮಾಜ ಸೇವಕ ಆರ್.ಪಿ. ವೆಂಕಟೇಶ್ಮೂರ್ತಿ, ಖ್ಯಾತ ವೈದ್ಯ ಡಾ. ಗುರುರಾಜ್ ಹೆಬ್ಬಾರ್, ಎಸ್ಎಸ್ಎಂ ಆಸ್ಪತ್ರೆಯ ವೈದ್ಯೆ ಡಾ. ಸೌಮ್ಯ, ಸಮಾಜ ಸೇವಕಿ ಕೆ.ಟಿ. ಜಯಶ್ರೀ, ಶೇಷೆಗೌಡ ಇತರರು ಇದ್ದರು.