12ರಂದು ಗ್ರಾಮ ಸಹಾಯಕರ ರ್ಯಾಲಿ
ಹಾರನಹಳ್ಳಿ: ರಾಜ್ಯ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘ ಹಾಗೂ ತುಮಕೂರು ಘಟಕದ ಆಶ್ರಯದಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರ ಹುದ್ದೆಯನ್ನು ಡಿ ದರ್ಜೆಗೇರಿಸಿ ಸೇವಾ ಭದ್ರತೆಯನ್ನು ಒದಗಿಸುವಂತೆ ಒತ್ತಾಯಿಸಿ ಆ.12 ರಂದು ಬೆಳಗ್ಗೆ 10.30ಕ್ಕೆ ಸಿದ್ಧಗಂಗಾ ಮಠದಿಂದ ಹೊರಟು ತುಮಕೂರು ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನಾ ರ್ಯಾಲಿಗೆ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಗ್ರಾಮ ಸಹಾಯಕರು ಈ ಪ್ರತಿಭಟನೆಗೆ ಆಗಮಿಸುವಂತೆ ಅರಸೀಕೆರೆ ತಾಲೂಕು ಗ್ರಾಮ ಸಹಾಯಕರ ಸಂಘದ ಉಪಾಧ್ಯಕ್ಷ ಹಾರನಹಳ್ಳಿ ಸಿದ್ದಯ್ಯ ಕೋರಿದ್ದಾರೆ.