ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಲೂ ಬೆಳೆಗೆ ರೋಗ: ಸಕಾಲದಲ್ಲಿ ಔಷಧಿ ಸಿಂಪಡಿಸಲು ಸಲಹೆ

Mainashree
Updated On : 9 Aug 2013, 11:28 am

ಕ.ಪ್ರ. ವಾರ್ತೆ೤ ಹಾಸನ೤ ಆ. 9
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ಡಿ.ರತ್ನ ಹನುಮೇಗೌಡರ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಾಮಾನ್ಯ ಸಭೆ ಜರುಗಿತು. ಸಾಲಗಾಮೆ ಕಸಬಾ ಹೋಬಳಿ ಸೇರಿದಂತೆ ಸುತ್ತಾ ಮುತ್ತಾ ಆಲೂ ಬೆಳೆಗೆ ನಾನಾ  ರೋಗಗಳು ಕಂಡು ಬಂದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮಂಜುನಾಥ್ ತಿಳಿಸಿದರು.
 ಶಾಂತಿಗ್ರಾಮ ಹಾಗೂ ಕಟ್ಟಾಯದಲ್ಲಿ ಆಲೂ ಬೆಳೆಗೆ ಅಷ್ಟೊಂದುರೋಗ ಕಂಡು ಬಂದಿಲ್ಲ ಎಂದ ಅವರು, ಈ ರೋಗಕ್ಕೆ ಸಮರ್ಪಕವಾಗಿ ರೈತರು ಕ್ರಿಮಿನಾಶಕ ಸಿಂಪಡಿಸಬೇಕು. ಮುಖ್ಯವಾಗಿ ಆಲೂ ಬೆಳೆ ಮಳೆ ಹೆಚ್ಚಾಗಿ ದ್ದರಿಂದ ಸಾಕಷ್ಟು ಹಾನಿಯಾಗಿದೆ ಎಂದು ಹೇಳಿದರು.
 ಆಲೂ ಬೆಳೆ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ತಾಪಂ ಸದಸ್ಯರು ಪ್ರಶ್ನಿಸಿದರು. ಯಾವ ರೈತರು ಆಲೂ ಬೆಳೆಗೆ ಅರ್ಜಿ ಹಾಕಿದ್ದಾರೆ ಅವರಿಗೆ ಎಕರೆಗೆ ಒಂದೂವರೆ ಸಾವಿರ ರು. ಪರಿಹಾರ ಲಭ್ಯವಾಗಲಿದೆ. ವಿಮೆಯಲ್ಲೂ ರೈತರಿಗೆ ಪರಿಹಾರ ಸಿಗಲಿದೆ ಎಂದರು.
  ಸರ್ಕಾರದಿಂದ ಈ ಪರಿಹಾರ ಇನ್ನು ಘೋಷಣೆ ಮಾಡಿ ಲ್ಲ ಎಂದರು. ನಾನಾ ಇಲಾಖೆಯ ಅಧಿಕಾರಿಗಳು ತಮ್ಮ ಕೆಲಸದ ಕಾರ್ಯವನ್ನು ವಿವರಿಸಿದರು. ತಾಪಂ ಉಪಾಧ್ಯಕ್ಷ ದೇವೆಗೌಡ, ಕಾರ್ಯನಿರ್ವಾಹಣಾಧಿಕಾರಿ ಕೆ.ಸಿ. ದೇವರಾಜೇಗೌಡ, ಎಸ್.ಕೆ. ಕುಮಾರಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement