ಕಬ್ಬಿಣಾಂಶ ಮಾತ್ರೆ ಸೇವಿಸಿ ಕೆಲ ಮಕ್ಕಳು ಅಸ್ವಸ್ಥ
ಪಿರಿಯಾಪಟ್ಟಣ: ಶಾಲೆಯಲ್ಲಿ ಬುಧವಾರ ಹಾಗೂ ಗುರುವಾರ ಎರಡೂ ದಿನ ಕಬ್ಬಿಣಾಂಶದ ಮಾತ್ರ ನೀಡಿದ ಪರಿಣಾಮ ಕೆಲವು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಗುರುವಾರ ರಾತ್ರಿ ಜರುಗಿದೆ.ತಾಲೂಕಿನ ಜವನೀಕುಪ್ಪೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಅಲ್ಲಿನ ಶಿಕ್ಷಕರು ವಾರಕ್ಕೆ ಒಂದು ಬಾರಿ ನೀಡುವ ಕಬ್ಬಿಣಾಂಶವಿರುವ ಮಾತ್ರೆಯನ್ನು ಸತತವಾಗಿ ಬುಧವಾರ ಹಾಗೂ ಗುರುವಾರ ಎರಡು ದಿನಗಳು ನೀಡಿದ ಪರಿಣಾಮ ಮಾತ್ರೆ ಸೇವಿಸಿದ ಕೆಲವು ವಿದ್ಯಾರ್ಥಿಗಳುಅಸ್ವಸ್ಥಗೊಂಡು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದು, ಚೇತರಿಸಿಕೊಂಡಿದ್ದಾರೆ.ಮಾತ್ರೆ ಸೇವಿಸಿದ ಮಕ್ಕಳ ಪೈಕಿ ದಿಲೀಪ್ (9), ದಿವ್ಯ (12), ರಚನ (8), ಸಿಂಚನ (9), ಅಮೃತ (12), ಅರ್ಚನ (13) ತೀವ್ರವಾಗಿ ಅಸ್ವಸ್ಥಗೊಂಡು ಹೊಟ್ಟೆ ನೋವು, ವಾಂತಿ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡು ಗುರುವಾರ ರಾತ್ರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.