ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗುರಿ, ಛಲದಿಂದ ಯಶಸ್ಸು

Mainashree
Updated On : 9 Aug 2013, 11:26 am

ಕನ್ನಡಪ್ರಭ ವಾರ್ತೆ೤ ಹೊಳೆನರಸೀಪುರ೤ ಆ. 9
ಯಶಸ್ಸುನ್ನು ಯಾರೂ ಮಾರುವುದಿಲ್ಲ ಮತ್ತು ಕೊಡುವುದಿಲ್ಲ. ಬದಲಿಗೆ ಯಶಸ್ಸನ್ನು ನಿರ್ಧಿಷ್ಟ ಗುರಿ ಮತ್ತು ಅದಮ್ಯ ಛಲದೊಂದಿಗೆ ನಾವುಗಳೇ ಸಾಧಿಸಬೇಕಾಗುತ್ತದೆ. ಈ ಯಶಸ್ಸು ಗಳಿಸುವ ಹಾದಿಯಲ್ಲಿ ತಾಳ್ಮೆಯು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಮೈಸೂರು ವಿವಿಯ ಉದ್ಯೋಗ ತರಬೇತಿ ಘಟಕದ ಎಚ್.ಎಸ್.ಬಾಲಸುಬ್ರಹ್ಮಣ್ಯ ಹೇಳಿದರು.
ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಹಮ್ಮಿಕೊಳ್ಳಲಾಗಿದ್ದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.  
  ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿ ಹಾಗೂ ಭವಿಷ್ಯದಲ್ಲಿನ ಕಾರ್ಯಯೋಜನೆಗಳನ್ನು ವಿದ್ಯಾರ್ಥಿಗಳೇ ಸ್ವಂತವಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಾಡಿಕೊಳ್ಳಬೇಕಾದ ಸಿದ್ಧತೆಗಳ ಕುರಿತಂತೆ ಹಲವಾರು ನಿದರ್ಶನಗಳು ಹಾಗೂ ಸಾಧಕರ ಸಾಧನೆಯ ಹಾದಿಯನ್ನು ವಿವರಿಸಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು.
  ಯುವಶಕ್ತಿಯಲ್ಲಿ ಅತ್ಯುತ್ತಮ ಕೌಶಲ್ಯವಿದ್ದರೂ, ಅದರ ಸದ್ಬಳಕೆ ಕುರಿತಂತೆ ನಮ್ಮಲ್ಲಿನ ಕಾಳಜಿಯ ಕೊರತೆಯಿಂದಾಗಿ ನಾವು ಸಾಧಿಸಬೇಕಾದ ಗುರಿಯಲ್ಲಿನ ತೊಡಕುಗಳ ಕುರಿತು ತಿಳಿಸಿದ ಬಾಲಸುಬ್ರಹ್ಮಣ್ಯ, ನಮ್ಮ ಬದುಕಿಗೆ ನಾವುಗಳೇ ಒಂದು ನಿರ್ದಿಷ್ಟ ಗುರಿ ಅಥವಾ ಸಾಧನೆಯ ಹಾದಿಯನ್ನು ರೂಪಿಸಿಕೊಳ್ಳಬೇಕಿದ್ದು, ಸಾಧನೆಗೆ ಯಾವುದೇ ಒಳದಾರಿಗಳಿಲ್ಲ, ಯಶಸ್ಸು ಎಂಬುದು ಬಹುದೂರದ ಹಾದಿಯಾಗಿದ್ದು ದಾರಿಯಲ್ಲಿನ ಎಲ್ಲ ಎಡರು-ತೊಡರುಗಳನ್ನು ಎದುರಿಸಿ ಮುನ್ನಡೆದಲ್ಲಿ ಸಾಧನೆ ಅಸಾಧ್ಯವೇನಲ್ಲ ಎಂದು ನುಡಿದರು.
 ಸಾಧನೆಗೆ ಯೋಜನೆಗಿಂತಲೂ ಯತ್ನ ಮತ್ತದರ ಮುಂದೆ ಪ್ರಯತ್ನದ ಅಂಶವು ಬಹು ಮುಖ್ಯವೆನಿಸುವ ಅಂಶ. ಈ ಸಾಧನೆಯನ್ನು ಕೈವಶ ಮಾಡಿಕೊಳ್ಳಲು ಮಾನಸಿಕ ಸ್ಥಿರತೆಯು ದೈಹಿಕ ಸಬಲತೆಗಿಂತಲೂ ಹೆಚ್ಚು ಶಕ್ತಿಶಾಲಿಯಾದ ಸಾಧನವಾಗಿದೆ ಎಂದು ತಿಳಿಸಿದರು.
 ಬದುಕಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಕುರಿತಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ಹಿರಿಯ ಪತ್ರಕರ್ತ ಎಚ್.ವಿ.ಸುರೇಶ್‌ಕುಮಾರ್ ಅವರು ಸಾಧಕರೆನಿಸಿದವರು ವಿಶೇಷವಾದದ್ದನ್ನು ಸಾಧಿಸುವ ಬದಲಿಗೆ ತಾವು ಮಾಡುವ ಕಾರ್ಯಗಳನ್ನೇ ವಿಶೇಷವಾಗಿ ಮಾಡುವ ಮೂಲಕ ಸಾಧಕರೆನಿಸುತ್ತಾರೆ ಎಂದರು.
 ವಿದ್ಯಾರ್ಥಿಗಳು ಯಾವಾಗಲೂ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕಿವಿಮಾತು ಹೇಳಿದ ಅವರು, ಸಾಧನೆಯ ಗುರಿಯನ್ನು ನಿಗಧಿಗೊಳಿಸಿಕೊಂಡಲ್ಲಿ ಅದರೆಡೆಗಿನ ದಾರಿಯು ತನ್ನಂತಾನೇ ತೆರೆದುಕೊಳ್ಳುತ್ತದೆ ಎಂದು ಹೇಳಿದರು.
 ಕಾಲೇಜು ಪ್ರಾಂಶುಪಾಲ ಪ್ರೊ.ಬಸವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಪ್ರೊ.ಚಂದ್ರಕುಮಾರ್, ರಾಜಶೇಖರ್, ರಮೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು.
  ಅಧ್ಯಾಪಕ ಭುವನೇಂದ್ರ, ಶಾಂತ, ರಾಮೇಗೌಡ ಹಾಗೂ ಕಾಲೇಜಿನ ಅಧ್ಯಾಪಕ ವರ್ಗದವರು ಕಾರ್ಯಕ್ರಮದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement