ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲಾದ್ಯಂತ ಸಂಭ್ರಮದ ರಂಜಾನ್

Mainashree
Updated On : 9 Aug 2013, 11:26 am

ಕನ್ನಡಪ್ರಭ ವಾರ್ತೆ ಹಾಸನ ಆ. 9
ರಂಜಾನ್ ಪ್ರಯುಕ್ತ ತಿಂಗಳು ಪರ್ಯಂತ ಉಪವಾಸ ಆಚರಿಸಿದ ಮುಸ್ಲಿಮರು ಜಿಲ್ಲಾದ್ಯಂತ ಶುಕ್ರವಾರ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹಾಸನ ನಗರ, ಅರಸೀಕೆರೆ, ಬೇಲೂರು, ಹೊಳೆನರಸೀಪುರ, ಅರಕಲಗೂಡು, ಚನ್ನರಾಯಪಟ್ಟಣ, ಆಲೂರು ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಬಿಳಿ ವಸ್ತ್ರ ಧರಿಸಿದ ಮುಸ್ಲಿಮರು ಮಸೀದಿಗೆ ತೆರಳಿ ಸಾಮೂಹಿಕ ನಮಾಜ್ ಸಲ್ಲಿಸಿ, ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ಪ್ರಸಿದ್ಧ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ನಮಾದ್ ಸಲ್ಲಿಸಿ ನಂತರ ಹಿರಿಯರು, ಕಿರಿಯರು ಶುಭಾಶಯ ಕೋರಿದರು. ಜೆಡಿಎಸ್ ಶಾಸಕ ಎಚ್.ಎಸ್. ಪ್ರಕಾಶ್, ಪಟೇಲ್ ಶಿವರಾಂ, ಕಾರ್ಲೇ ಇಂದ್ರೇಶ್, ಫೈರೋಜ್ ಖಾನ್, ಕಾಂಗ್ರೆಸ್ ಮುಖಂಡ ಎಚ್.ಪಿ. ಮೋಹನ್, ಎಚ್.ಕೆ.ಜವರೇಗೌಡ, ಎಚ್.ಕೆ. ಮಹೇಶ್, ಡಾ. ಲೋಕೇಶ್, ಜಿಲ್ಲಾಧಿಕಾರಿ ಅನ್ಬು ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣ, ಹೆಚ್ಚುವರಿ ಪೊಲೀಸ್ ಅಧಿಕಾರಿ ರಶ್ಮಿ,  ಪೊಲೀಸ್ ಇನ್ಸ್‌ಪೆಕ್ಟರ್ ಸಂಜೀವೇಗೌಡ ಇತರರು ಈದ್ಗಾ ಮೈದಾನಕ್ಕೆ ಆಗಮಿಸಿ ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯ ಕೋರಿ ಸಿಹಿಯನ್ನು ಸೇವಿಸಿದರು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.


ಸಕಲೇಶಪುರ ತಾಲೂಕಿನಾದ್ಯಂತ ಈದ್ ಆಚರಣೆ
ಸಕಲೇಶಪುರ: ತಾಲೂಕಿನಾದ್ಯಂತ ಮುಸ್ಲಿಮರು ಶುಕ್ರವಾರ ಸಂಭ್ರಮದಿಂದ ರಂಜಾನ್ ಆಚರಿಸಿದರು. ಪಟ್ಟಣದ ಈದ್ಗಾ ಮೈದಾನದಲ್ಲಿ ಪುಟಾಣಿಗಳು, ಹಿರಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ತಿಂಗಳ ಪರ್ಯಂತ ಆಚರಿಸಿಕೊಂಡು ಬಂದಿದ್ದ ಉಪವಾಸ ವ್ರತದ ನಂತರ ವಯಸ್ಸಿನ ಅಂತರವಿಲ್ಲದೆ ಎಲ್ಲರೂ  ಹೊಸ ಉಡುಗೆ ತೊಡುಗೆ ಉಟ್ಟು ಪರಸ್ಪರ ಒಬ್ಬರ ಮನೆಗೆ ಒಬ್ಬರು ತೆರಳಿ ಶುಭಾಶಯ ಸಲ್ಲಿಸಿದರು.
ಕಳೆದ ಕೆಲ ದಿನಗಳಿಂದ ಮಳೆ ಆರ್ಭಟ ಕಡಿಮೆಯಾಗಿದ್ದರಿಂದ ಈದ್ಗಾ ಮೈದಾನದಲ್ಲಿ ಪಟ್ಟಣದ ಬಹುತೇಕ ಮುಸ್ಲಿಮರು ಏಕಕಾಲದಲ್ಲಿ ನಮಾಜ್ ಸಲ್ಲಿಸಲು  ಅನುಕೂಲವಾಯಿತು. ಪ್ರಾರ್ಥನೆ ನಂತರ ಧರ್ಮಗುರು ಮೌಲಾನ ಖಾರಿ ಅಝೀಮುದ್ದೀನ ಬೋಧನೆ, ಮಾರ್ಗದರ್ಶನ ನೀಡಿ ಮಾತನಾಡಿದರು. ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಸಹನೆ, ಕೋಮು ಸೌಹಾರ್ದತೆಯಿಂದ ಬಾಳಿದರೆ ಮಾತ್ರ ಸಮಾಜದಲ್ಲಿ ಶಾಂತಿ ಸಾಧ್ಯ ಎಂದು ತಿಳಿಸಿದರು.

ಪರೋಪಕಾರ, ದಾನದ ಮಹತ್ವ ಸಾರುವ ಹಬ್ಬ
ಸಕಲೇಶಪುರ
: ತಾಲೂಕಿನಾದ್ಯಂತ ಮುಸ್ಲಿಮರು ಶುಕ್ರವಾರ ಸಂಭ್ರಮದಿಂದ ರಂಜಾನ್ ಆಚರಿಸಿದರು. ಪಟ್ಟಣದ ಈದ್ಗಾ ಮೈದಾನದಲ್ಲಿ ಪುಟಾಣಿಗಳು, ಹಿರಿಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ತಿಂಗಳ ಪರ್ಯಂತ ಆಚರಿಸಿಕೊಂಡು ಬಂದಿದ್ದ ಉಪವಾಸ ವ್ರತದ ನಂತರ ವಯಸ್ಸಿನ ಅಂತರವಿಲ್ಲದೆ ಎಲ್ಲರೂ  ಹೊಸ ಉಡುಗೆ ತೊಡುಗೆ ಉಟ್ಟು ಪರಸ್ಪರ ಒಬ್ಬರ ಮನೆಗೆ ಒಬ್ಬರು ತೆರಳಿ ಶುಭಾಶಯ ಸಲ್ಲಿಸಿದರು.
ಕಳೆದ ಕೆಲ ದಿನಗಳಿಂದ ಮಳೆ ಆರ್ಭಟ ಕಡಿಮೆಯಾಗಿದ್ದರಿಂದ ಈದ್ಗಾ ಮೈದಾನದಲ್ಲಿ ಪಟ್ಟಣದ ಬಹುತೇಕ ಮುಸ್ಲಿಮರು ಏಕಕಾಲದಲ್ಲಿ ನಮಾಜ್ ಸಲ್ಲಿಸಲು  ಅನುಕೂಲವಾಯಿತು. ಪ್ರಾರ್ಥನೆ ನಂತರ ಧರ್ಮಗುರು ಮೌಲಾನ ಖಾರಿ ಅಝೀಮುದ್ದೀನ ಬೋಧನೆ, ಮಾರ್ಗದರ್ಶನ ನೀಡಿ ಮಾತನಾಡಿದರು. ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಸಹನೆ, ಕೋಮು ಸೌಹಾರ್ದತೆಯಿಂದ ಬಾಳಿದರೆ ಮಾತ್ರ ಸಮಾಜದಲ್ಲಿ ಶಾಂತಿ ಸಾಧ್ಯ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement