ಜೂಜಾಟ: 20 ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಅಂದರ್ -ಬಾಹರ್ ಜೂಜಾಡುತ್ತಿದ್ದ 20 ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕು ಪಾಪನಘಟ್ಟ ಗೇಟ್ ಅಕ್ರಮವಾಗಿ ಅಂದರ್ ಬಾಹರ್ ಜೂಜಾಡುತ್ತಿದ್ದ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಪಾಪನಘಟ್ಟ ಗೇಟ್ ನಿವಾಸಿ ಗಂಗಾಧರ (30), ಜಬಘಟ್ಟದ ರಂಗಸ್ವಾಮಿ (35), ಗುಂಗುರುಮಳೆಗೇಟ್‌ನ ಕಿಟ್ಟಿ (35), ಜಗಘಟ್ಟದ ಪರಮೇಶ (30), ಹರೀಶ (26) ಬಂಧಿತ ಆರೋಪಿಗಳು. ಅವರು ಪಣಕ್ಕಿಟ್ಟಿದ್ದ 3400 ರು. ನಗದು ವಶಪಡಿಸಿಕೊಂಡಿರುವ ನುಗ್ಗೇಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ತಾಲೂಕಿನ ಮಸಕನಹಳ್ಳಿಯ ತಿಮ್ಮೇಗೌಡರ ತೆಂಗಿನತೋಟದಲ್ಲಿ ಅಕ್ರಮವಾಗಿ ಅಂದರ್ -ಬಾಹರ್ ಜೂಜಾಡುತ್ತಿದ್ದ 7 ಮಂದಿಯನ್ನು ಹಿರೀಸಾವೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಸಕನಹಳ್ಳಿಯ ಗೋವಿಂದರಾಜು (32), ಶೆಟ್ಟಿಹಳ್ಳಿ ಗ್ರಾಮದ ಶಂಕರೇಗೌಡ (49), ಮಸಕನಹಳ್ಳಿಯ ಕೃಷ್ಣೇಗೌಡ (34), ಶಂಕರ (36), ಮಹೇಶ (36), ಶೆಟ್ಟಿಹಳ್ಳಿಯ ತಿಮ್ಮೇಗೌಡ (48) ಬೋರೇಗೌಡ (48), ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2670 ರು. ನಗದು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ತಾಲೂಕು ಕಲ್ಲುಸಾದರಹಳ್ಳಿ ಗೊಲ್ಲರಹಟ್ಟಿಯ ಸಮೀಪ ಅಂದರ್ -ಬಾಹರ್ ಜೂಜಾಡುತ್ತಿದ್ದ 8 ಮಂದಿಯನ್ನು ಬಾಣಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲ್ಲುಸಾದರಹಳ್ಳಿಯ ಜಯಣ್ಣ (35), ಈರಪ್ಪ (43), ಮೂರ್ತಿ (28), ಸುರೇಶ (22), ನಿಂಗಸ್ವಾಮಿ (27), ಕುಮಾರ (27), ಸುರೇಶ (25), ರಾಜಪ್ಪ (25) ಬಂಧಿತ ಆರೋಪಿಗಳು. ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1900 ರು. ನಗದು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ ಕೈಗೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅರಕಲಗೂಡು ತಾಲೂಕಿನ ರಾಮನಾಥಪುರ ಬಸ್ ನಿಲ್ದಾಣದಲ್ಲಿ ಅಗ್ರಹಾರ ಗ್ರಾಮದ ಆರೋಪಿ ಚಂದ್ರ ಉರುಫ್ ಚಂದ್ರಬೋವಿ (45) ಪರವಾನಗಿ ಇಲ್ಲದೇ ಅಕ್ರಮವಾಗಿ ಮಾರಾಟ ಮಾಡಲು ಮದ್ಯ ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.
1329 ರು. ಬೆಲೆಯ 180 ಎಂಎಲ್‌ನ ಒರಿಜಿನಲ್ ಚಾಯ್ಸ್ ಡಿಲಕ್ಸ್ 30 ಬಾಟಲಿಗಳನ್ನು ವಶಪಡಿಸಿಕೊಂಡಿರುವ ಕೊಣನೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಚನ್ನರಾಯಪಟ್ಟಣ ಮೈಸೂರು ರಸ್ತೆಯಲ್ಲಿರುವ ಗೌಡ (21) ಮಿಲ್ಟ್ರಿ ಹೊಟೇಲ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.1595 ರು. ಬೆಲೆಯ ವಿವಿಧ ಮಾದರಿಯ ಮದ್ಯದ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.