'ಧರ್ಮಸ್ಥಳ'ಯೋಜನೆ: 25 ಕೋಟಿ ಸಾಲ ನೀಡುವ ಗುರಿ
ನುಗ್ಗೇಹಳ್ಳಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನುಗ್ಗೇಹಳ್ಳಿ ಹೋಬಳಿ ಮಂಜುನಾಥೇಶ್ವರ ಮಹಿಳಾ ಸ್ವಸಹಾಯ ಸಂಘಗಳಿಗೆ 6 ತಿಂಗಳಲ್ಲಿ 25 ಕೋಟಿ ರು. ಸಾಲ ನೀಡುವ ಗುರಿ ಹೊಂದಿದೆ ಎಂದು ಬಜಗೂರು ವಲಯ ಮೇಲ್ವಿಚಾರಕ ಎಸ್. ಶಿವಣ್ಣ ತಿಳಿಸಿದರು. ಅವರು ನುಗ್ಗೇಹಳ್ಳಿಯಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟ ಸಭೆ ಉದ್ಘಾಟಿಸಿ ಮಾತನಾಡಿದರು. ವ್ಯಾಪಾರ, ಹಸು, ಕುರಿ ಸಾಕಾಣಿಕೆಗೆ ಒಬ್ಬರಿಗೆ 45000 ಸಾವಿರ ರು. ಸಾಲ ನೀಡುತ್ತೇವೆ, 3 ವರ್ಷ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಸದಸ್ಯರು ಕಡ್ಡಾಯವಾಗಿ ಜೀವ ವಿಮೆ ಮಾಡಿಸಿಕೊಳ್ಳಬೇಕು 50 ಗಿಡ ದಾಳಿಂಬೆ ಬೆಳೆಯಲು ಧನ ಸಹಾಯ ಸಿಗುತ್ತದೆ ಎಂದು ತಿಳಿಸಿದರು.
ಬಿ.ಇ ಡಿಪ್ಲೊಮಾ ಮಾಡುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸಾವಿರ ಐಟಿಐ ಮಾಡುವ ವಿದ್ಯಾರ್ಥಿಗಳಿಗೆ 400 ರು. ಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೀಡಲಾಗುತ್ತದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳು ಉತ್ತಮ ಕೆಲಸ ಮಾಡಬೇಕು. ತಪ್ಪಾಗಿ ನಡದುಕೊಂಡವರನ್ನು ಕೆಲಸದಿಂದ ತೆಗೆಯುತ್ತೇವೆ ಎಂದರು. ನಾಟಿ ಹಸುಗಳ ಸಂಖ್ಯೆ ಹಳ್ಳಿಗಳಲ್ಲಿ ಕಡಿಮೆಯಾಗುತ್ತಿದ್ದು ಮನೆಗೊಂದು ನಾಟಿ ಹಸು ಸಾಕಲು ತಿಳಿಸಿದರು. ಸಮಾರಂಭದಲ್ಲಿ ಚೇತನ ರಂಜಿತ ಬಿ.ಶಕುಂತಲ ಮೊದಲಾದವರು ಉಪಸ್ಥಿತರಿದ್ದರು.