ನಗರಸಭೆಯಿಂದ ಫುಟ್ಪಾತ್ ಅಂಗಡಿ ತೆರವು
ಕ.ಪ್ರ. ವಾರ್ತೆ, ಹಾಸನ ಆ. 9
ನಗರದ ಆನೇಕ ಕಡೆ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಹಾಕಿಕೊಂಡಿದ್ದ ಅಂಗಡಿಗಳನ್ನು ನಗರಸಭೆ ವತಿಯಿಂದ ಶುಕ್ರವಾರ ಆರೋಗ್ಯ ವಿಭಾಗದ ಅಧಿಕಾರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ನಗರದ ಸ್ಲೇಟರ್‌ಹಾಲ್ ಮುಂಭಾಗದ ರಸ್ತೆ ಬದಿ ಮೂರು ನಾಲ್ಕು ಹಣ್ಣಿನ ಅಂಗಡಿ ಹಾಕಿಕೊಂಡು ಕಳೆದ ಮೂರು ವರ್ಷಗಳಿಂದಲೂ ವ್ಯಾಪಾರ ನಡೆಸಲಾಗುತ್ತಿತ್ತು.
ದಿನೇ ದಿನೇ ವಾಹನ ಸಂಚಾರ ಹೆಚ್ಚಾಗಿದ್ದರಿಂದ ನಗರಸಭೆ ಸಿಬ್ಬಂದಿ ಶುಕ್ರವಾರ ಬೆಳಗ್ಗೆ ಅಂಗಡಿಯ ತೆರವು ಗೊಳಿಸಿತು.