ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪದವಿ: ಹೊಯ್ಸಳೇಶ್ವರ ಕಾಲೇಜಿಗೆ ಉತ್ತಮ ಫಲಿತಾಂಶ

Mainashree
Updated On : 9 Aug 2013, 11:30 am

ಅರಸೀಕೆರೆ: 2012-13ನೇ ಏಪ್ರಿಲ್ - ಮೇ ನಲ್ಲಿ ನಡೆದ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಪಟ್ಟಣದ ಹೊಯ್ಸಳೇಶ್ವರ ಪದವಿ ಕಾಲೇಜು ಬಿ.ಎ. ವಿಭಾಗದಲ್ಲಿ ಶೇ.91, ಬಿಎಸ್ಸಿ  ಶೇ.89 ಹಾಗೂ ಬಿಕಾಂ ವಿಭಾಗದಲ್ಲಿ ಶೇ.85 ಫಲಿತಾಂಶ ಪಡೆದಿದೆ.
ಬಿ.ಕಾಂ ವಿಭಾಗದಲ್ಲಿ 600 ಅಂಕಗಳಿಗೆ ಕೆ.ಎಂ.ನಂದಿನಿ - 549, ಚರಣ್ - 539, ಚೇತನ್ 532, ಹೇಮಂತ್
 ಕುಮಾರ್ 521, ರಾಧಿಕಾ 514, ತಾಜೂನ್ 508, ಮೋಹನ್‌ಕುಮಾರ್ 508, ಶ್ವೇತಾ 507, ಸೌಮ್ಯ 506, ಮಾಧುರಿ 500, ನಾಗರತ್ನ ವೈ.ಸಿ.467, ಯಶಸ್ವಿನಿ 462, ಪ್ರೇಮಕುಮಾರ್ 458, ಪಡೆದಿದ್ದು ಒಟ್ಟು 13 ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಅಂತಿಮ ಬಿ.ಎ. ಎಚ್‌ಕೆಎಸ್ ವಿಭಾಗದ ಚೇತನ್  900 ಅಂಕಗಳಿಗೆ 762 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಎಚ್‌ಇಪಿ ವಿಭಾಗದ ಪ್ರಮೋದ್ 751, ಮಧು  700, ಎಚ್‌ಕೆಎಸ್ ವಿಭಾಗದ ವಿದ್ಯಾರ್ಥಿಗಳಾದ ಪವಿತ್ರ 726, ಶಿಲ್ಪಶ್ರೀ 706 ಅಂಕ ಗಳಿಸುವ ಮೂಲಕ ವಿಶ್ವವಿದ್ಯಾನಿಲಯದ ಡಿಸ್ಟಿಂಕನ್
ಗಿಟ್ಟಿಸುವಲ್ಲಿ ಸಫಲರಾಗಿದ್ದಾರೆ. ಅಂತಿಮ ಬಿ.ಎ.ವಿದ್ಯಾರ್ಥಿ ಪ್ರಮೋದ್ 3 ವರ್ಷಗಳಲ್ಲಿಯೂ ಅತ್ಯುತ್ತಮ ಸಾಧನೆ ಮಾಡಿ 3800 ಅಂಕಗಳಿಗೆ 3167 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿನಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲೆ  ಟಿ.ಸರೋಜಮ್ಮ ಹಾಗೂ ಪ್ರಾಧ್ಯಾಪಕ ವರ್ಗ ಅಭಿನಂದಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement