ಪ್ರಸಾದಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆ
ಕನ್ನಡಪ್ರಭ ವಾರ್ತೆ ಬೇಲೂರು ಆ.9
ಮಕ್ಕಳಿಗೆ ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಉಪಯೋಗದ ಬಗ್ಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಕನಸು ಇದೀಗ ನನಸಾಗಿದೆ ಎಂದು ಮುಖ್ಯ ಶಿಕ್ಷಕ ರೆಹಮತ್ ಹೇಳಿದರು. ತಾಲೂಕಿನ ಪ್ರಸಾದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ಸಮಿತಿಯವರು 30 ಸಾವಿರ ರು. ಮೌಲ್ಯದ ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಕೊಡುಗೆಯಾಗಿ ನೀಡಿರುವ ಕಂಪ್ಯೂಟರ್ ಅನ್ನು ಎಸ್‌ಎಲ್ ಡಿಡಿ ಗ್ರಂಥಾಲಯದಲ್ಲಿ ಅಳವಡಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಂಪ್ಯೂಟರ್ ಮಹತ್ವ ಮತ್ತು ಇಂಟರ್‌ನೆಟ್ ಬಳಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು ಎಂದರು.ಎಸ್‌ಡಿಎಂಸಿಯ ಪರಮೇಶ್, ನಾರಾಯಣ್, ಕುಮಾರ್, ಕವಿತ, ಶಾಂತ ಇದ್ದರು. ಮಂಜುನಾಥ್ ವಂದಿಸಿದರು.