ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

17 ರಂದು ತಿರುಪತಿಹಳ್ಳಿ ಬೆಟ್ಟದಲ್ಲಿ ಸಮುದಾಯ ಭವನ ಉದ್ಘಾಟನೆ

Rashmi Kasaragodu
Updated On : 10 Aug 2013, 11:32 am

ಕನ್ನಡಪ್ರಭ ವಾರ್ತೆ೤ ಹಾಸನ೤ ಆ. 10
ಶ್ರೀಚಿಕ್ಕಗಿರಿ ರಂಗನಾಥ ಸ್ವಾಮಿ ಸಮುದಾಯ ಭವನ ಉದ್ಘಾಟನಾ ಸಮಾರಂಭ ಅರಸೀಕೆರೆಯ ತಿರುಪತಿಹಳ್ಳಿ ಬೆಟ್ಟದಲ್ಲಿ ಆ.17ರಂದು ನೆರವೇರಲಿದೆ ಎಂದು ಶ್ರೀಚಿಕ್ಕಗಿರಿ ರಂಗನಾಥ ಸೇವಾನ್ಯಾಸ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್.ರಾಮಮೂರ್ತಿ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನ ಸಮಾರಂಭ ಯತಿವರ್ಯರಾದ ಬೆಲಗೂರು ವೀರಪ್ರತಾಪ ಆಂಜನೇಯ ಸ್ವಾಮೀಜಿ ಔಪಾಸಕರು ಶ್ರೀಬಿಂದುಮಾಧವ ಶರ್ಮ, ಹಾರನಹಳ್ಳಿ ಶ್ರೀಕೋಡಿಮಠ ಸಂಸ್ಥಾನ ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮೀಜಿ, ಆದಿಚುಂಚನಗಿರಿ ಸಂಸ್ಥಾನ ಹಾಸನ ಶಾಖಾಮಠದ ಶ್ರೀಶಂಭುನಾಥ ಸ್ವಾಮೀಜಿ ಸಮ್ಮುಖದಲ್ಲಿ ನೆರವೇರಲಿದೆ ಎಂದರು.
 ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ.ರೇವಣ್ಣ, ಶಾಸಕ ಎಚ್.ಎಸ್.ಪ್ರಕಾಶ್, ವೈ.ಎಸ್.ವಿ.ದತ್ತ ಪಟೇಲ್ ಶಿವರಾಂ, ಭವಾನಿ ರೇವಣ್ಣ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಜಿಲ್ಲಾಧಿಕಾರಿ ಅನ್ಬು ಕುಮಾರ್, ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮಣ್, ಡಾ.ಶ್ಯಾಮಲಾದೇವಿ, ತಹಸೀಲ್ದಾರ್ ಮಂಜುನಾಥ್  ಉದ್ಯಮಿ ರಾಮದಾಸ್ ಅಟ್ಟಾವರ್ ಭಾಗವಹಿಸಲಿದ್ದಾರೆ.
16ರಂದು ಸಂಜೆ ಗೋಧೂಳಿ ಲಗ್ನದಲ್ಲಿ ಶ್ರೀಚಿಕ್ಕಗಿರಿರಂಗನಾಥ ಸ್ವಾಮಿಯ ಉತ್ಸವ ಮೂರ್ತಿಯ ಪ್ರವೇಶ, ಕುಲದೇವತಾ ಪ್ರಾರ್ಥನೆ, ಮಹಾಗಣಪತಿ ಪೂಜೆ, ಮಹಾಸಂಕಲ್ಪ, ಪುಣ್ಯಾಹ, ಶುದ್ಧಿ, ಕಲಶ ಸ್ಥಾಪನೆ, ರಾಕ್ಷೋಘ್ನ ಹೋಮ, ಅಘೋರಾಸ್ತ್ರ ಹೋಮ, ನವಗ್ರಹ ಹೋಮ, ವಾಸ್ತು ಹೋಮವು ಜರುಗಲಿದೆ ಎಂದ ಅವರು, ಮುಂದಿನ ದಿನಗಳಲ್ಲಿ 3 ಕೋಟಿ ರು.ವೆಚ್ಚದಲ್ಲಿ ಜೀರ್ಣೋದ್ಧಾರ  ಹಮ್ಮಿಕೊಳ್ಳಲಾಗುತ್ತಿದೆ. ಭಕ್ತಾಧಿಗಳು ತನುಮನಧನ ಸಹಾಯ ಮಾಡಬಯಸುವವರು ಸಹಕಾರಿ ನೀಡುವಂತೆ ಮನವಿ ಮಾಡಿದರು.ಸಂಸ್ಥೆ ಅಧ್ಯಕ್ಷ ಟಿ.ಆರ್.ದಿವಾಕರ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement