ಅಂಗವಿಕಲರ ಕಲ್ಯಾಣಕ್ಕಾಗಿ ವಿಶೇಷ ಸೇವೆ ಸಲ್ಲಿಸಿದವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ
ಹಾಸನ: ಕೇಂದ್ರ ಸರ್ಕಾರ 2013ನೇ ಸಾಲಿಗೆ ಕೆಳಗೆ ಪ್ರಸ್ತಾಪಿಸಿರುವ ಕ್ಷೇತ್ರಗಳಲ್ಲಿ ಅಂಗವಿಕಲರ ಕಲ್ಯಾಣಾಕ್ಕಾಗಿ ವಿಶೇಷ ಸೇವೆ ಸಲ್ಲಿಸಿದವರಿಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ನೀಡಿಕೆಗೆ ಅರ್ಜಿ ಆಹ್ವಾನಿಸಲಾಗಿದೆ. ವಿಕಲಚೇತನತೆ ಹೊಂದಿದ ಶ್ರೇಷ್ಠ ನೌಕರರು (ಸ್ವಯಂ ಉದ್ಯೋಗಿಗಳು ಸೇರಿ), ವಿಕಲಚೇತನತೆ ಹೊಂದಿದ ವ್ಯಕ್ತಿಗಳ ಶ್ರೇಷ್ಠ ಉದ್ಯೋಗದಾತರು ಮತ್ತು ಉದ್ಯೋಗ ನೀಡಿಕೆ ಅಧಿಕಾರಿ, ಏಜೆನ್ಸಿ (ಸರ್ಕಾರಿ ನೌಕರರು ಮತ್ತು ಪಿಎಸ್ ಎರಡು ಸೇರಿದಂತೆ), ವಿಕಲಚೇತನತೆ ಹೊಂದಿದ ವ್ಯಕ್ತಿಗಳಿಗಾಗಿ ಕೆಲಸ ಮಾಡುತ್ತಿರುವ ಶ್ರೇಷ್ಠ ವ್ಯಕ್ತಿ ಮತ್ತು ಸಂಸ್ಥೆ, ರೋಲ್ಮಾಡಲ್, ವಿಕಲಚೇತನತೆಗೆ ಪರಿಹಾರ ಒದಗಿಸಲು ಅತ್ಯುತ್ತಮ ತಂತ್ರಜ್ಞಾನ ನಾವೀನ್ಯತೆ ಮತ್ತು ಉಳಿದ ತಂತ್ರಜ್ಞತೆ ಒದಗಿಸಲು ನಾವಿನ್ಯತೆ ಅಳವಡಿಕೆ, ವಿಕಲಚೇತನತೆಯುಳ್ಳ ಪ್ರತಿಭಾವಂತ ರಚನಾತ್ಮಕ ವ್ಯಕ್ತಿ, ಅತ್ಯುನ್ನತ ಬ್ರೈಲ್ ಮುದ್ರಾಣಾಲಯ, ಅತ್ಯುನ್ನತ ಅಸೆಸ್ಸಬಲ್ ವೈಬ್ಸೈಟ್ (ಇಜಡಡಿ ಆ್ಛ್ಛಜಡಡಛಛಿಟಜ ಗಿಜಛಿಡ್ಝಡಿಜ). ಅರ್ಜಿಯೊಂದಿಗೆ ವ್ಯಕ್ತಿಗಳ ವಿವರದ ಸಾರಾಂಶ, ಉದಾಹರಣೆ ಸಾಮಗ್ರಿ ಮಾದರಿ, ಇತ್ತೀಚಿನ 2 ಪಾಸ್ಪೋರ್ಟ್ ಸೈಜಿನ ಭಾವಚಿತ್ರ. ಲಗತ್ತಿಸಿರಬೇಕು. ಅರ್ಜಿ ನಮೂನೆಗಳನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ 9ನೇ ಕ್ರಾಸ್, ಕೆ.ಆರ್.ಪುರಂ, ಹಾಸನ ಕಚೇರಿಯಿಂದ ಅಥವಾ ಡ್ಟ್ಛ್ಝಛಟಞ್ಡಡಡ್ಝ್ಛಿಜ.ಟ್ಝ್ಛಿ.್ಝಟಿ ವೈಬ್ಸೈಟ್ನಿಂದ ಪಡೆಯಬಹುದು. ಸಂಪೂರ್ಣ ಮಾಹಿತಿಯೊಂದಿಗೆ ಭರ್ತಿಮಾಡಿದ ಅರ್ಜಿ ಆ.16 ರೊಳಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ದೂ- 08172-264546 ಸಂಪರ್ಕಿಸಲು ಕೋರಲಾಗಿದೆ.