ಅತ್ಯುತ್ಸಾಹದಿಂದ ನಡೆದ ಶಾಲಾ ಸಂಸತ್ ಚುನಾವಣೆ
ಕನ್ನಡಪ್ರಭ ವಾರ್ತೆ ಬೇಲೂರು ಆ.10
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಶಾಲಾ ಸಂಸತ್ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು. ಮಧ್ಯಾಹ್ನ 2 ರಿಂದ ಚುನಾವಣಾ ಪ್ರಕ್ರಿಯೆ ಅರಂಭಗೊಂಡಿತು. 578 ವಿದ್ಯಾರ್ಥಿಗಳು 51 ವಿದ್ಯಾರ್ಥಿಗಳಿಗೆ ಮತಚಲಾಯಿಸುವ ಮೂಲಕ ಶಾಲಾ ಸಂಸತ್ತಿಗೆ ಆಯ್ಕೆ ಮಾಡಿದರು.
8ನೇ ತರಗತಿಯಿಂದ 14ಕಣದಲ್ಲಿದ್ದು 173 ವಿದ್ಯಾರ್ಥಿಗಳು ಮಸೀದಾ ಬಾನು, ನಿರಂಜನ, ಸಚಿನ್
ದರ್ಶನ್, ಎಂ.ವೈ, ಶೇಯಸ್ಸ್, ಯದುಶ್ರೀ, 9ನೇತರಗತಿಯಿಂದ 210 ವಿದ್ಯಾರ್ಥಿಗಳು 6 ವಿದ್ಯಾರ್ಥಿಗಳಾದ ಶ್ರೀನಿವಾಸ, ಪ್ರದೀಪ ಎ.ಎನ್.ಪ್ರೀತಿ.ವಿ, ಸುನೀಲ್ರಾವ್, ಜೀವನ್, ಕಿರಣ್ಗೌಡ, 10ನೇತರಗತಿಯಿಂದ 193 ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳಾದ ಲೋಕೇಶ್ ಮೂರ್ತಿ ಪ್ರಜ್ವಲ್, ಪ್ರಮೋದ್, ಭುವನೇಶ್ವರಿ, ನೇಹಾ, ಮೋಹನಕುಮಾರಿ ಆಯ್ಕೆಯಾದರು.
ಚುನಾವಣಾಧಿಕಾರಿ ಶಿಕ್ಷಕಿ ಪುಟ್ಟಲಕ್ಷ್ಮಮ್ಮ ಬಿ.ಎಸ್. ಮಾತನಾಡಿ ಚುನಾವಣಾ ಹಾಗೂ ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಲು ಚುನಾವಣೆ ನಡೆದಿದ್ದು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಶ್ಲಾಘನೀಯ ಎಂದರು. ನಂತರ ಮಂತ್ರಿ ಮಂಡಲ, ರಚನೆ ಮಾಡಲಿದ್ದು ಖಾತೆಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.