ಉಪ ಚುನಾವಣೆಯಲ್ಲಿ ಹಲವರ ಬೆಂಬಲ: ಅಯೂಬ್
ಮೈಸೂರು: ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ಗೆ ನಡೆಯುವ ಉಪ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಾದ ನನಗೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ನ ಮುಖಂಡರು ಬೆಂಬಲ ಸೂಚಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಅಯೂಬ್ಖಾನ್ ಹೇಳಿದರು.
ಬಿಜೆಪಿ ಅಭ್ಯರ್ಥಿ ಕಡೆ ಗಳಿಗೆಯಲ್ಲಿ ನಾಮಪತ್ರ ಹಿಂದಕ್ಕೆ ಪಡೆದ ಹಿನ್ನೆಲೆಯ್ಲಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಹಲವರು ನನಗೆ ಬೆಂಬಲ ಸೂಚಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಧರ್ಮಸೇನ ಅವರು ಅದಕ್ಷರು, ಅಲ್ಲದೆ ಕಾಂಗ್ರೆಸ್ನವರೆ ಆದ್ದರಿಂದ ಸರ್ಕಾರದ ವಿರುದ್ಧ ಒಂದು ಹೇಳಿಕೆಯನ್ನೂ ನೀಡಲು ಅವರಿಗೆ ಆಗದು. ಕೆಜೆಪಿ ಅಭ್ಯರ್ಥಿ ಶೇಖರ್ ಉದ್ಯಮಿಯಾದ್ದರಿಂದ ಸ್ಥಳೀಯ ಪ್ರತಿನಿಧಿಗಳು ಸರಿಯಾಗಿ ಸ್ಪಂದಿಸುವುದಿಲ್ಲ. ಆದರೆ ನಾನು ಸ್ಥಳೀಯ ಸಂಸ್ಥೆಯ ಚುನಾವಣೆಗೆ ಕಾರಣನಾದ ಹಿನ್ನೆಲೆಯಲ್ಲಿ ನನಗೆ ಬೆಂಬಲ ಸೂಚಿಸಿದ್ದಾರೆ ಎಂದರು.