ಎತ್ತಿನಹೊಳೆ ಸೇತುವೆ ನಿರ್ಮಾಣಕ್ಕೆ ಪ್ರಸ್ತಾವನೆ
ಕನ್ನಡಪ್ರಭ ವಾರ್ತೆ ಸಕಲೇಶಪುರ ಆ.10
ತಾಲೂಕಿನ ಹೆತ್ತೂರಿಗೆ ಸಂಪರ್ಕ ಕಲ್ಪಿಸುವ ಎತ್ತಿನಹೊಳೆ ಸೇತುವೆಯನ್ನು ಶೀಘ್ರ ಮರುನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಶನಿವಾರ ಅಲುವಳಿ ಸಮೀಪದ ಎತ್ತಿನಹಳ್ಳಿ ಸೇತುವೆ ಶಿಥಿಲಗೊಂಡಿರುವುದನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಅತಿ ರಭಸವಾಗಿ ಹರಿಯುವ ಎತ್ತಿನಹೊಳೆ ಸೇತುವೆ ಈ ಬಾರಿಯ ಅತಿವೃಷ್ಟಿಯಿಂದ ಈ ಸೇತುವೆ ಹಾನಿಗೊಂಡಿದ್ದು ದುರಸ್ತಿ ಅಸಾಧ್ಯವಾಗಿದೆ.
ಆದ್ದರಿಂದ ಹೊಸ ಸೇತುವೆ ನಿರ್ಮಾಣ ಮಾಡಬೇಕಾಗಿದ್ದು ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಹಣ ಬೇಕಿದೆ. ಇದನ್ನು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ಶೀಘ್ರ ಮರು ನಿರ್ಮಾಣಕ್ಕೆ ಒತ್ತಡ ಹೇರಲಾಗುವುದು ಎಂದು ಹೇಳಿದರು.