ಕ್ರೀಡಾಕೂಟ: ಹೆಬ್ಬಳಲು ಶಾಲೆ ಉತ್ತಮ ಸಾಧನೆ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಅಕ್ಕನಹಳ್ಳಿ ಕ್ರಾಸ್ನಲ್ಲಿ ನಡೆದ ನುಗ್ಗೇಹಳ್ಳಿ ಹೋಬಳಿ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹೆಬ್ಬಳಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ಸಾಧನೆ ಮಾಡಿದೆ.
ಬಾಲಕಿಯರ ವಿಭಾಗದಲ್ಲಿ ಸಿ.ಎನ್. ವರ್ಷಿತ, ಉದ್ದಜಿಗಿತ ಹಾಗೂ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಗ್ರೂಪ್ ಚಾಂಪಿಯನ್ಷಿಪ್ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಎಲ್.ಪಿ. ವಿಜಯಲಕ್ಷ್ಮಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾಳೆ.
ಬಾಲಕರ ವಿಭಾಗದಲ್ಲಿ ಖೋ ಖೋ ತಂಡ ಪ್ರಥಮಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಗೊಂಡು ಶಾಲೆಗೆ ಮತ್ತು ಹೋಬಳಿಗೆ ಕೀರ್ತಿ ತಂದಿದ್ದಾರೆ. ಸಾಧನೆಗೈದ ಮಕ್ಕಳನ್ನು ಶಾಲಾ ಶಿಕ್ಷಕ ವೃಂದ, ಎಸ್ಡಿಎಂಸಿ ಅಧ್ಯಕ್ಷ ಮತ್ತು ಸದಸ್ಯರು ಅಭಿನಂದಿಸಿದ್ದಾರೆ.
ವೊಡಾಫೋನ್ನಿಂದ ಸ್ವಾತಂತ್ರ್ಯೋತ್ಸವ
ಮೈಸೂರು: ವೊಡಾಫೋನ್ ಇಂಡಿಯಾವು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಜ್ಯದ ತನ್ನ ಎಲ್ಲಾ 43 ಮಳಿಗೆಗಳಲ್ಲಿ ಆರ್ಸಿ 67 ಹೆಸರಿನ 67 ಮೌಲ್ಯದ ಟಾಕ್ ಟೈಂ ವೋಚರ್ಗಳನ್ನು ಬಿಡುಗಡೆ ಮಾಡಿದೆ ಎಂದು ಸಂಸ್ಥೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.