ಬಸ್ ಆ್ಯಕ್ಸಲ್ ತುಂಡು; ತಪ್ಪಿದ ಅಪಾಯ
ಬೇಲೂರು: ರಸ್ತೆ ಸಾರಿಗೆ ಸಂಸ್ಥೆ ಬಸ್ ಜಾಯಿಂಟ್ ಆ್ಯಕ್ಸಲ್ ತುಂಡಾಗಿ ಪ್ರಯಾಣಿಕರು ಭಾರಿ ಅಪಾಯದಿಂದ ಪಾರಾದ ಘಟನೆ ಶನಿವಾರ ಅರೇಹಳ್ಳಿ ಸಮೀಪ ನಡೆದಿದೆ.
ವಿಷ್ಣುಸಮುದ್ರ ಕೆರೆ ಘಟನೆಯಿಂದ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬುದಕ್ಕೆ ಶನಿವಾರ ಅರೇಹಳ್ಳಿ ಸಮೀಪ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ.
ಮೂಡಿಗೆರೆಯಿಂದ ಅರೇಹಳ್ಳಿ ಮಾರ್ಗ ಹಾಸನಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಸಿಂಗಾಪುರ ಗ್ರಾಮದ ಬಳಿ ಬಂದಾಗ ಆ್ಯಕ್ಸಲ್ ತುಂಡಾಯಿತು. ತಕ್ಷಣ ಬ್ರೇಕ್ ಒತ್ತಿ ವೇಗ ಕಡಿಮೆ ಮಾಡಿ, ಬಸ್‌ಗೆ ಪ್ರಯಾಣಿಕರು ಕಲ್ಲು ಕೊಟ್ಟಿದ್ದರಿಂದ ಬಸ್ ಸ್ಟಾಪ್ ಮಾಡಲು ಸಹಕಾರಿಯಾಯಿತು. ಇನ್ನು 10 ಅಡಿ ಮುಂದಕ್ಕೆ ಬಸ್ ಚಲಿಸಿದ್ದರೆ ಎರಡೂ ಬದಿ 20 ಅಡಿ ಆಳದ ಕಂದಕಗಳಿದ್ದು ಅವಕ್ಕೆ ಬಸ್ ಬೀಳುವ ಅಪಾಯವಿತ್ತು ಎಂದು ಬಸ್ ಚಾಲಕ ತಿಳಿಸಿದ್ದಾರೆ.