ವಾಂತಿಭೇದಿಯಿಂದ ಮಹಿಳೆ ಸಾವು ?
ಬಾದಾಮಿ: ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಪೂರೈಕೆಯಾದ ಪರಿಣಾಮ ಗ್ರಾಮದ 30ಕ್ಕೂ ಹೆಚ್ಚು ಜನ ವಾಂತಿಭೇದಿಯಿಂದ ನರಳುತ್ತಿದ್ದು, ಮಹಿಳೆಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
ದ್ಯಾವಕ್ಕ ತುಡಬಿನ್ (66) ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾಳೆ ಎಂದು ಗ್ರಾಮಸ್ಥರು ದೂರಿದ್ದಾರೆ. ಮಹಿಳೆ ವಿಪರೀತ ಮಧುಮೇಹ ಮತ್ತು ಅಸ್ತಮಾದಿಂದ ಬಳಲುತ್ತಿದ್ದು ಅದರಿಂದಲೇ ಮೃತಪಟ್ಟಿದ್ದಾಳೆ.
ಉಳಿದಂತೆ ಯಾವುದೇ ರೀತಿಯ ಪ್ರಾಣ ಹಾನಿ ಆಗಿಲ್ಲ. ವಾಂತಿಭೇದಿಯಿಂದ ಬಳಲುತ್ತಿದ್ದ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.