ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಗರೆ ಗ್ರಾಪಂ ಮೇಲ್ಛಾವಣಿ ಕಳಪೆ-ಕೊಠಡಿ ತುಂಬಾ ಮಳೆ ನೀರು

Rashmi Kasaragodu
Updated On : 10 Aug 2013, 11:30 am

ಕ.ಪ್ರ.ವಾರ್ತೆ    ಬೇಲೂರು    ಆ.10
ತಾಲೂಕಿನ ಹಗರೆ ಗ್ರಾಮ ಪಂಚಾಯಿತಿ ಬೇಲೂರು ತಾಲೂಕಿನ 37 ಗ್ರಾಮ ಪಂಚಾಯ್ತಿಯಲ್ಲಿ ಉನ್ನತ ಸ್ಥಾನ ಗಳಿಸಿದ ಗ್ರಾಮ ಪಂಚಾಯಿತಿ ಎಂದು ಖ್ಯಾತಿ ಪಡೆದಿದೆ. ಆದರೆ ಈ ಗ್ರಾಮ ಪಂಚಾಯಿತಿಯಲ್ಲಿ ಮೇಲ್ಚಾವಣಿ ಭದ್ರತೆ ಇಲ್ಲದೆ ಕಚೇರಿ ತುಂಬಾ ಮಳೆ ನೀರು ಹರಿಯುತ್ತಿದೆ. ಹೀಗಾಗಿ ಸಾರ್ವಜನಿಕರ ಕೆಲಸ ಕಾರ್ಯಕ್ಕೆ ತೊಂದರೆಯಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹಗರೆ ಗ್ರಾಮ ಪಂಚಾಯ್ತಿ ಬೇಲೂರು ಮತ್ತು ಹಾಸನ ಹೆದ್ದಾರಿ ಮಧ್ಯೆ ಭಾಗದಲ್ಲಿರುವ ನಿಟ್ಟಿನಲ್ಲಿ ಕಳೆದ ಐದು ವರ್ಷದಿಂದೀಚೆಗೆ ಈ ಗ್ರಾಮ ಉನ್ನತವಾಗಿ ಬೆಳೆದಿದೆ. ಹೆದ್ದಾರಿ ಮಧ್ಯೆ ಇರುವ ಈ ಗ್ರಾಮದ ಸುತ್ತ-ಮುತ್ತಲ ಜಮೀನುಗಳು ರಿಯಲ್ ಎಸ್ಟೇಟ್ ಮಾಫಿಯಾ ದೊರೆಗಳ ಪಾಲಾಗಿದೆ. ಈ ಕಾರಣದಿಂದ ಗ್ರಾಮ ಪಂಚಾಯ್ತಿಗೆ ಉತ್ತಮ ಆದಾಯ ಇದ್ದರೂ ಗ್ರಾಮ ಪಂಚಾಯ್ತಿ ಕಟ್ಟಡವನ್ನು ಕಳಪೆ ಮಟ್ಟದಲ್ಲಿ ನಿರ್ಮಿಸಿಕೊಳ್ಳಲಾಗಿದೆ.
ಮಳೆ ಬಂದರೇ ಸಾಕು ಕಚೇರಿ ತುಂಬಾ ಮಳೆ ನೀರು ನಿಲ್ಲವ ಪರಿಸ್ಥಿತಿಯಾಗಿದೆ. ಗಣಕ ಯಂತ್ರದ ಕೊಠಡಿ ಹಾಗೂ ಅಧ್ಯಕ್ಷರ ಕೊಠಡಿ, ಸಭಾಂಗಣ ಮಳೆ ನೀರಿನಿಂದ ತುಂಬಿದ್ದು, ಇಲ್ಲಿನ ಅಧ್ಯಕ್ಷರು ಮತ್ತು ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಜನತೆ ಆರೋಪಿಸಿದ್ದಾರೆ.
ಹಗರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 25 ಹಳ್ಳಿಗಳಿವೆ. ಸಾರ್ವಜನಿಕರು ಪಂಚತಂತ್ರ, ಪಡಿತರ ಚೀಟಿ ಬಯೋವುಟ್ರಿಕ್  ಇನ್ನಿತರರ ಸವಲತ್ತುಗಳನ್ನು ಈ ಕಟ್ಟಡದಲ್ಲಿ ಪಡೆಯಬೇಕು. ಈ ಬಾರಿ ತಿಂಗಳಿನಿಂದ ಭಾರೀ ಮಳೆಯಾದ್ದರಿಂದ ಮೇಲ್ಚಾವಣಿಯಿಂದ ಗೋಡೆಗಳ ಮೂಲಕ ನೀರು ಬರುತ್ತಿದೆ. ಗ್ರಾಪಂ ಅಧ್ಯಕ್ಷ, ಸದಸ್ಯರು, ಅಧಿಕಾರಿಗಳು ನೀರು ಒಳ ಬಂದರೂ ಅಸಹಾಯಕತೆಯಿಂದ ಕರ್ತವ್ಯ ನಿರ್ವಹಿಸುವಂತಾಗಿದೆ.
ಕಚೇರಿಯಲ್ಲಿ ಕಂಪ್ಯೂಟರ್,ಇನ್ನಿತರ ಸಾಮಗ್ರಿಗಳು ಇದ್ದು ಗೋಡೆಗಳಲ್ಲಿ ನೀರು ಇಳಿಯುತ್ತಿರುವುದರಿಂದ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಇದೆ. ಗ್ರಾಮ ಪಂಚಾಯ್ತಿ ಕಟ್ಟಡವನ್ನು ಸಮರ್ಪಕವಾಗಿ ನಿರ್ಮಾಣ ಮಾಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎನ್ನುತ್ತಾರೆ ಸಾರ್ವಜನಿಕರು.
ಒಟ್ಟಾರೆ ಹಗರೆ ಗ್ರಾಮ ಪಂಚಾಯ್ತಿಯಲ್ಲಿ ಆದಾಯ ಹೆಚ್ಚಾಗಿದ್ದರೂ ಇಲ್ಲಿನ ಅಧಿಕಾರಿಗಳ ಮತ್ತು ಅಧ್ಯಕ್ಷರ ಜಾಣ ಮೌನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಾರದೊಳಗೆ ಮೇಲ್ಛಾವಣಿ ಸರಿ ಮಾಡಿ ಸಾರ್ವಜನಿಕರ ಕೆಲಸಕ್ಕೆ ಅನುವು ಮಾಡಕೊಡಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸ್ಥಳೀಯ ಸಂಘ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement