ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಿಲ್ಲೆಯಲ್ಲಿ ಸಂಭ್ರಮದ ನಾಗರ ಪಂಚಮಿ

Mainashree
Updated On : 11 Aug 2013, 11:44 am

ಕನ್ನಡಪ್ರಭ ವಾರ್ತೆ  ಹಾಸನ  ಆ. 11
ಜಿಲ್ಲಾದ್ಯಂತ ಭಾನುವಾರ ನಾಗರಪಂಚಮಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ನಾಗರ ಪಂಚಮಿ ಹಬ್ಬದಂದು ನಾಗರ ಹುತ್ತಗೆ ತೆನೆ ಎರೆದು ಹಾಲು ಹಾಕುವುದು ಪ್ರತೀತಿ. ಅದೇ ರೀತಿ ನಗರದ ಮಹಾರಾಜ ಉದ್ಯಾನವನದ ಆವರಣದಲ್ಲಿರುವ ಹುತ್ತಕ್ಕೆ ಭಕ್ತಾಧಿಗಳು ಹಾಲೆರೆದು ಪೂಜೆ ಮಾಡಿದರು. ಮಕ್ಕಳೊಂದಿಗೆ ಮಹಿಳೆಯರು ತಂಡೋಪತಂಡ ನಾಗರಕಟ್ಟೆಗೆ ಆಗಮಿಸಿ ಅಲ್ಲಿನ ಹುತ್ತಕ್ಕೆ ಹಾಲೆರದು, ಒಳ್ಳೆಯದಾಗುವಂತೆ ನಾಗರಾಜನನ್ನು ಭಕ್ತಿ ಭಾವದಿಂದ ಬೇಡಿಕೊಂಡರು.
ಜಾವಗಲ್ ಪಟ್ಟಣದಲ್ಲಿ:   ಜಾವಗಲ್‌ನಲ್ಲಿ ಭಾನುವಾರ ಬೆಳಗಿನಿಂದಲೇ ಭಕ್ತರು ನಾಗರಕಟ್ಟೆಗೆ ತೆರಳಿ ಹುತ್ತಕ್ಕೆ ಹಾಲು ಎರೆದು, ನಂತರ ನಾಗರ ದೇವಾಲಯಗಳಿಗೆ ಹೋಗಿ ಪೂಜೆ ಸಲ್ಲಿಸಿದರು. ನಾಗರ ಪೂಜೆ ಬಳಿಕ ಅಕ್ಕ-ತಂಗಿಯರು ಅಣ್ಣ-ತಮ್ಮಂದಿರು ಬೆನ್ನು ತೊಳೆಯುವ ಸಂಪ್ರದಾಯವಿದ್ದು ತನಿ ಎರೆದ ಹಾಲನ್ನು ಹೂವಿನಲ್ಲಿ ಅದ್ದಿ ಸೋದರರ ಬೆನ್ನಿಗೆ ಸವರಿ ತವರು ಮನೆಯಲ್ಲಿ ಸುಖ ಶಾಂತಿ ನೆಲಸಲಿ, ಸಮೃದ್ಧಿ ಉಂಟಾಗಲಿ ಎಂದು ಹಾರೈಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement