ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಸ್ತೆ ಅಭಿವೃದ್ಧಿಗೆ ರು. 40 ಕೋಟಿ ಆಗತ್ಯ: ಶಾಸಕ

Mainashree
Updated On : 11 Aug 2013, 11:47 am

ಕ.ಪ್ರ. ವಾರ್ತೆ  ಸಕಲೇಶಪುರ  ಆ. 11
ತಾಲೂಕಿನ ಹಾನುಬಾಳ್ ಹೋಬಳಿ ರಸ್ತೆಗಳ ಅಭಿವೃದ್ಧಿಗೆ 40 ಕೋಟಿ ರು. ಅಗತ್ಯವಿದೆ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ. ಶನಿವಾರ ಹಾನುಬಾಳ್ ಹೋಬಳಿಯ ಅತಿವೃಷ್ಟಿ ಪೀಡಿತ ನಾನಾ ಪ್ರದೇಶಗಳಿಗೆ  ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
 ಹೋಬಳಿಯ ಬಹುತೇಕ ರಸ್ತೆಗಳು ಮಳೆಗೆ ಹಾಳಾಗಿ ಹೋಗಿದ್ದು, ವಾಹನ ಹಾಗೂ ಜನ ಸಂಚಾರ ದುಸ್ಥರವಾಗಿದೆ. ಹೋಬಳಿಯೊಂದರಲೇ ಸುಮಾರು 6 ಸೇತುವೆಗಳು ಹಾನಿಗೊಂಡಿವೆ. ಬತ್ತದ ಗದ್ದೆಗಳು ಹಾಗೂ ಏಲಕ್ಕಿ, ಕಾಫಿ ತೋಟಗಳ ಹಾನಿ ವರದಿ ಲೆಕ್ಕಕ್ಕೆ ಸಿಗದಾಗಿದೆ.
   ಆದ್ದರಿಂದ ಈ ಭಾಗದ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ 40 ಕೋಟಿ ರು. ಅಗತ್ಯವಿದ್ದು, ಮೊದಲ ಹಂತದಲ್ಲೆ ತುತು ಪರಿಹಾರವಾಗಿ ಸರ್ಕಾರ 10 ಕೋಟಿ ರು. ಬಿಡುಗಡೆ ಮಾಡ ಬೇಕು ಎಂದರು.
ಅತಿವೃಷ್ಟಿ ಸಮೀಕ್ಷೆ ಅಂಗವಾಗಿ ಅಗನಿ, ಅವರೇಕಾಡು, ದೂಣಹಳ್ಳಿ, ಬೈಲಹಳ್ಳಿ, ಕುಂಬರಹಳ್ಳಿ, ನೆಲ್ಗಳ್ಳಿ, ಕೂಗರವಳ್ಳಿ, ಚಿಮ್ಮಿನಕೂಲು ಗ್ರಾಮದಲ್ಲಿ ಹಾನಿಗೊಂಡಿರುವ ಸರ್ಕಾರಿ ಸ್ವತ್ತುಗಳು ಹಾಗೂ ಖಾಸಗಿ ಆಸ್ತಿಪಾಸ್ತಿಗಳನ್ನು ವೀಕ್ಷಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement