ಸುದ್ದಿ ಸಂಕ್ಷೇಪ
ಸಾರಿಗೆ ಸಂಸ್ಥೆ ನಿವೃತ್ತ, ಹಾಲಿ ನೌಕರರ ಸಭೆ
ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಹಾಸನ ಮತ್ತು ಚಿಕ್ಕಮಗಳೂರು ವಿಭಾಗದ ನಿವೃತ್ತ ಹಾಗೂ ಹಾಲಿ ನೌಕರರ ಮಹಾಸಭೆ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಟೌನ್‌ಹಾಲ್‌ನಲ್ಲಿ ಆ. 13 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ರಾಜ್ಯದ ಎಲ್ಲಾ ನಾಲ್ಕು ಸಾರಿಗೆ ನಿಗಮಗಳ ನಿವಣತ್ತ ಮತ್ತು ಹಾಲಿ ನೌಕರರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಇದೇ ಸಂದರ್ಭದಲ್ಲಿ ನಿವೃತ್ತ, ಹಾಲಿ ನೌಕರರಿಗೆ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಉಚಿತವಾಗಿ ಓಡಾಡಲು ಪಾಸು ಹಾಗೂ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸು ವಂತೆ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲಾ ್ಲ ಶಾಖೆ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹನುಮಂತು ತಿಳಿಸಿದ್ದಾರೆ.
ಬಿ.ಎ. ಪರೀಕ್ಷೆ: ಶೇ.100 ಫಲಿತಾಂಶ
ಜಾವಗಲ್: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ ಪರೀಕ್ಷೆಯಲ್ಲಿ ಸತತವಾಗಿ 7ನೇ ಬಾರಿಗೆ ಶೇ100 ರಷ್ಟು ಫಲಿತಾಂಶ ದೊರಕಿದೆ. ಮೈಸೂರು ವಿಶ್ವ ವಿದ್ಯಾನಿಲಯದ 2012-13 ನೇ ಮೇ-ಜೂನ್ ನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ ತರಗತಿಯ 66 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಎಲ್ಲಾ 66 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿ.ಎಸ್. ಗಂಗಾಧರ್ 900 ಅಂಕಗಳಿಗೆ 717 ಅಂಕಗಳಿಸಿ (ಶೇ79.66) ಕಾಲೇಜಿಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಯಾಗಿದ್ದಾನೆ. ಜೆ.ಜಿ ತನುಜ 711, ನೂತನ್ 707 ಅಂಕಗಳಿಸಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದ್ದಾರೆ. ಸತತವಾಗಿ 7ನೇ ಬಾರಿಗೆ ಶೇ100 ರಷ್ಟು ಫಲಿತಾಂಶ ದೊರೆಕಿಸಿಕೊಂಡಿರುವ ಪ್ರಥಮ ದರ್ಜೆ ಕಾಲೇಜ್ ಉತ್ತಮ ಫಲಿತಾಂಶ ನೀಡುತ್ತಿರುವ ಮೈಸೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯ ಗ್ರಾಮಾಂತರ ಪ್ರದೇಶದ ಕಾಲೇಜುಗಳಲ್ಲಿ ಒಂದಾಗಿದೆ. ಕಾಲೇಜಿನಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆಯಿದ್ದರೂ ಉತ್ತಮ ಫಲಿತಾಂಶ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ.
ಬೈಕ್‌ಗೆ ಬಸ್ ಡಿಕ್ಕಿ: ಬಾಲಕ ಸಾವು
ಹಾಸನ: ರಾಜ್ಯ ರಸ್ತೆ ಸಾರಿಗೆ ಬಸ್ ಬೈಕ್‌ಗೆ ಡಿಕ್ಕಿ ಮಾಡಿದ ಪರಿಣಾಮ ಬಾಲಕ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ನಗರದ ಸರ್ಕಾರಿ ಆಸ್ಪತ್ರೆ ವೈದ್ಯ ಪೂರ್ಣಚಂದ್ರ ಎಂಬುವರ ಪುತ್ರ ಬೆನಕ ಚಂದ್ರ (7) ಸಾವನ್ನಪ್ಪಿದ ದುರ್ದೈವಿ. ಬೆನಕ ಬೆಳಗ್ಗೆ ತಂದೆ ಪೂರ್ಣಚಂದ್ರ ಅವರೊಂದಿಗೆ ಬೈಕ್‌ನಲ್ಲಿ ಅಂಗಡಿಗೆ ಬಂದಿದ್ದು, ವಾಪಸ್ ಮನೆಗೆ ತೆರಳುವ ಸಂದರ್ಭದಲ್ಲಿ ಬಸ್ ಬೈಕ್‌ಗೆ ಡಿಕ್ಕಿ ಪರಿಣಾಮ ಬೆನಕ ಕೆಳಗೆ ಬಿದ್ದ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ.