ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೇವೆಯಿಂದ ಜನ್ಮ ಸಾರ್ಥಕ: ಮಂಜುನಾಥ್

Mainashree
Updated On : 11 Aug 2013, 11:48 am

ಹಾಸನ: ಅಧಿಕಾರ ಮತ್ತು ಹುದ್ದೆಯನ್ನು ಮರೆತು ಸೇವೆ ಮಾಡಿದಾಗ ಮಾತ್ರ ಮಾನವ ಜನ್ಮ ಸಾರ್ಥಕ ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.  
ಹಾಸನ ತಾಲೂಕು ರೆಡ್‌ಕ್ರಾಸ್ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ರೆಡ್‌ಕ್ರಾಸ್ ಒಂದು ಸೇವಾ ಸಂಸ್ಥೆಯಾಗಿದ್ದು, ಆಸಕ್ತರು ಇದರ ಸದಸ್ಯರಾಗಿ ಸೇವೆ ಮಾಡ ಬಹುದಾಗಿದೆ ಎಂದರು.
 ಕಾರ್ಯಕ್ರಮ ಉದ್ಘಾಟಿಸಿದ ಡಾ.ಗುರುರಾಜ ಹೆಬ್ಬಾರ್, ಜನರಲ್ಲಿ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿಗಳನ್ನು ಸಂಸ್ಥೆವತಿಯಯಿಂದ ಮುಂದಿನ ದಿನಗಳಲ್ಲಿ ಮಾಡಬೇಕಾಗಿದೆ. ಇದರ ಅರಿವು ಬಹಳ ಮುಖ್ಯವಾಗಿದೆ ಎಂದರು.
 ಸಂಸ್ಥೆ ಜಿಲ್ಲಾ ಘಟಕ ಮುಖ್ಯಸ್ಥ ಎಚ್.ಪಿ.ಮೋಹನ್ ಮಾತನಾಡಿ, ಹಾಸನದಲ್ಲಿ ರೆಡ್‌ಕ್ರಾಸ್ ಭವನ ನಿರ್ಮಿಸಿ, ಅದರಲ್ಲಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಬ್ಲಡ್ ಬ್ಯಾಂಕ್, ಐ ಬ್ಯಾಂಕ್ ಇತ್ಯಾದಿ ತೆರೆಯುವ ಉದ್ದೇಶವಿದೆ. ಆದುದರಿಂದ ಸಾರ್ವಜನಿಕರು ಕಟ್ಟಡ ನಿರ್ಮಿಸಲು ಸಹಕರಿಸ ಬೇಕೆಂದರು.
 ಅರಸೀಕೆರೆ ಮತ್ತು ಇತರೆ ತಾಲೂಕುಗಳಲ್ಲಿ ಘಟಕಗಳನ್ನು ರಚಿಸಲಾಗಿದೆ. ಹಂತ ಹಂತವಾಗಿ ಇನ್ನುಳಿದ ತಾಲ್ಲೂಕು ಘಟಕಗಳನ್ನು ರಚಿಸಲಾಗುವುದು ಎಂದರು. ಜಿಲ್ಲಾ ಶಾಖೆ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ
ತಾಲೂಕು ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಖಜಾಂಚಿ ಯು.ಜೆ.ಮಲ್ಲಿಕಾರ್ಜುನ್, ಸ್ವಾತಂತ್ರ್ಯ ಹೋರಾಟಗಾರ ಶಿವಣ್ಣ ಮತ್ತು ರಾಜ್ಯ ಶಾಖೆಯ ಯುವ ರೆಡ್‌ಕ್ರಾಸ್ ನಿರ್ದೇಶಕ ದೇವರಾಜ್ ಮಾತನಾಡಿದರು. ಭಾರತೀಯ ರೆಡ್‌ಕ್ರಾಸ್ ತಾ. ಘಟಕದ ಅಧ್ಯಕ್ಷರನ್ನಾಗಿ ಸುರೇಶ್‌ಗುರೂಜಿಯವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇನ್ನುಳಿದ ಪದಾಧಿಕಾರಿಗಳ ಆಯ್ಕೆಯನ್ನು 30 ದಿನಗಳೊಳಗಾಗಿ ಆಯ್ಕೆ ಮಾಡಲಾಗಿವುದು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.
 ಸದಸ್ಯ ಕೃಷ್ಣಪ್ಪ, ಕುಮಾರ್, ನಿರ್ಮಲ, ಕೆ.ಟಿ.ಜಯಶ್ರೀ ಮತ್ತು ಪಾಂಡುರಂಗ, ಕಚೇರಿ ಕಾರ್ಯದರ್ಶಿ ರಾಮೇಗೌಡ ಇದ್ದರು. ನಿರ್ದೇಶಕ ಕೃಷ್ಣಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement