ಅಕ್ಟೋಬರ್ನಲ್ಲಿ ವಿಶ್ವ ವಚನ ಸಮ್ಮೇಳನ
ಹಾಸನ: ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ, ವಚನ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದೆಹಲಿ ಕನ್ನಡ ಸಂಘದ ಆಶ್ರಯದಲ್ಲಿ ಅ.19 ಮತ್ತು 20 ರಂದು ವಿಶ್ವ ವಚನ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಚನ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ತಿ.ರಾಮಕೃಷ್ಣಯ್ಯ ತಿಳಿಸಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಸಮ್ಮೇಳನ ಉದ್ಘಾಟಿಸಲಿದ್ದು, ವಚನ ಚಿಂತನಾಗೋಷ್ಠಿ ವಚನ ವಾಚನ ಹಾಗೂ ಗಾಯನ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ ಕವಿಗಳಾಗಿ, ಕಲಾವಿದರಾಗಿ, ಅತಿಥಿಗಳಾಗಿ ಆಹ್ವಾನಿತರಾಗಿ ಭಾಗವಹಿಸಲು ಇಚ್ಛಿಸುವವರು ನಾಯಕರಹಳ್ಳಿ ಮಂಜೇಗೌಡ, ಜಿಲ್ಲಾಧ್ಯಕ್ಷರು, ವಚನ ಸಾಹಿತ್ಯ ಪರಿಷತ್, ಅಕ್ಷಯ ಭಂಡಾರ ಹತ್ತಿರ, ಗಣಪತಿ ದೇವಾಲಯ ಬೀದಿ, ಶಾಂತಿನಗರ, ಹಾಸನ, ಮೊ. 94483-18011 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ
ಹಾಸನ ನಗರದ ಕೃಷಿಕ್ ಸರ್ವೋದಯ ಫೌಂಡೇಷನ್ ಜಿಯ ಯುವಕ-ಯುವತಿಯರು ಖಾಸಗಿ ವಲಯದಲ್ಲಿ (ಕಾರ್ಪೋರೇಟ್ ವಲಯ) ಉದ್ಯೋಗ ದೊರಕಿಸಿಕೊಳ್ಳಲು ಸಮರ್ಥರಾಗುವಂತೆ ಮಾಡಲು ಪರಿಣಾಮಕಾರಿ ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿಯ ಮುಂದಿನ ಬ್ಯಾಚನ್ನು ಆ.16 ರಿಂದ ಏರ್ಪಡಿಸಿದೆ. ಆಸಕ್ತ ಯುವಕ ಯುವತಿಯರು ಖುದ್ದಾಗಿ ಅಥವಾ ದೂರವಾಣಿ ಮೂಲಕ ತಮ್ಮ ಪ್ರವೇಶವನ್ನು ಖಾತ್ರಿ ಪಡಿಸಿಕೊಳ್ಳುವಂತೆ ಕೆಎಸ್ಎಫ್ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊ.98454-93336 ಸಂಪರ್ಕಿಸಿ.