ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಅತಿವೃಷ್ಟಿ, ಅನಾವೃಷ್ಟಿಗೆ ಶೀಘ್ರ ಪರಿಹಾರ ನೀಡಿ'

Rashmi Kasaragodu
Updated On : 12 Aug 2013, 11:23 am

ಹಾಸನ: ಜಿಲ್ಲೆಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ, ಗ್ರಾಮ ಸಭೆಗಳಿಗೆ ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ಆಹ್ವಾನಿಸುವಲ್ಲಿ ನಿರ್ಲಕ್ಷ್ಯ, ಮಲೆನಾಡು ಭಾಗದ ಜನರ ಬದುಕಿನ ಸಮಸ್ಯೆಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಜಿಲ್ಲಾ ಪಂಚಾಯ್ತಿಯಲ್ಲಿ  ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ಹಲವು ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಯಿತು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಕರು, ವೈದ್ಯರ ಕೊರತೆಯಿದ್ದು ಜನಸಾಮಾನ್ಯರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಬೇಗ ಹೊಸ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕು. ಅಲ್ಲಿವರೆಗೆ ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರ ಕೊರತೆ: ಕೆಲವು ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಮತ್ತೆ ಕೆಲವೆಡೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ ಶಿಕ್ಷಕರ ಕೊರತೆ ಇದೆ.  ಇಂತಹ ಕಡೆಗಳಲ್ಲಿ ಹೊಸ ನೇಮಕಾತಿ ಪ್ರಕ್ರಿಯೇ ಮುಗಿಯುವವರೆಗೆ ತಾತ್ಕಾಲಿಕವಾಗಿ ಸ್ಥಳೀಯ ಅಭ್ಯರ್ಥಿಗಳನ್ನು ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಬೇಕು. ಕನಿಷ್ಠ ಐದು ಶಾಲೆಗಳಲ್ಲಿ ಒಬ್ಬರಂತೆ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವೆಡೆ ವಾಹನ ಸೌಕರ್ಯ ಕಲ್ಪಿಸಿ ಮೂರ್ನಾಲ್ಕು ಶಾಲೆಗಳ ಮಕ್ಕಳನ್ನು ಒಂದೆಡೆ ಸೇರಿಸಿ ಕಲಿಸುವಂತಾಗಬೇಕು, ಈ ನಿಟ್ಟಿನಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಬೇಕು ಎಂದು ಸಭೆಯಲ್ಲಿ ಕೋರಿದರು.
ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ತೆಂಗು ಬೆಳೆ ಸುಳಿಬಾಗಿ ಹಾನಿಗೀಡಾಗಿದ್ದು ತೋಟಗಾರಿಕೆ ಇಲಾಖಾ ಅಧಿಕಾರಿಗಳು ಹಾನಿ ಪ್ರಮಾಣವನ್ನು ಅಂದಾಜಿಸಿ ಶೀಘ್ರವೇ ವರದಿ ಸಲ್ಲಿಸಬೇಕು ಎಂದರು. ನ್ಯಾಫೆಡ್ನಿಂದ ತೆರೆಯಲಾಗಿರುವ ಕೊಬ್ಬರಿ ಖರೀದಿ ಕೇಂದ್ರ  ಆರಂಭಿಸಿದ್ದರೂ ಅದು ರೈತರಿಗೆ  ಅಷ್ಟೊಂದು ಅನುಕೂಲಕರವಾಗಿಲ್ಲ , ಇನ್ನೊಂದು ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಬೇಕು  ಎಂದು ಶಾಸಕರು ಒತ್ತಾಯಿಸಿದರು.
ಸಮಸ್ಯೆ ಶೀಘ್ರದಲ್ಲೇ ಬಗೆಹರಿಯಲಿ: ವಿಧಾನಪರಿಷತ್ ಸದಸ್ಯ  ಪಟೇಲ್ ಶಿವರಾಂ ಮಾತನಾಡಿ, ಜಿಲ್ಲೆಯಲ್ಲಿ ಆಲೂಗೆಡ್ಡೆ ಬೆಳೆ ಹಾನಿಗೆ ಶೀಘ್ರಗತಿಯಲ್ಲಿ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ದೊರೆಯಬೇಕು. ಜತೆಗೆ ಮಳೆಯಿಂದ ಮಲೆನಾಡು ಭಾಗದಲ್ಲಿ ಆಗಿರುವ ಬೆಳೆಹಾನಿ ಬಗ್ಗೆ ಕೃಷಿ ,ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಮೂಲಕ ಜಂಟಿ ಸಮೀಕ್ಷೆ ಮಾಡಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಕೋರಿದರು.
ಗ್ರಾಮ ಸಭೆಗಳಿಗೆ ಜಿಲ್ಲಾ ಪಂಚಾಯ್ತಿ  ಸದಸ್ಯರನ್ನು ಆಹ್ವಾನಿಸದೆ ಇರುವ ಬಗ್ಗೆ ಹಾಗೂ ಒಂದೇ ದಿನ ಮೂರು ಗ್ರಾಮ ಪಂಚಾಯ್ತಿಗಳಲ್ಲಿ ಸಭೆ ನಡೆಸುವ ವಿಷಯ ಕುರಿತು ಚರ್ಚಿಸಲಾಯಿತು.
ಮುಂಚಿತವಾಗಿ ಆಹ್ವಾನ ನೀಡಿ: ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ಒಂದು ವಾರ ಮುಂಚಿತವಾಗಿ ಆಹ್ವಾನ ನೀಡಬೇಕು ಮತ್ತು ಜಿಲ್ಲಾ ಪಂಚಾಯ್ತಿ  ಸದಸ್ಯರ ವ್ಯಾಪ್ತಿಯಲ್ಲಿ ಒಂದು ದಿನಕ್ಕೆ ಒಂದೇ ಗ್ರಾಮ ಪಂಚಾಯ್ತಿಯಲ್ಲಿ ಸಭೆ ನಡೆಸಲು ಸೂಚಿಸುವಂತೆ ಜಿಪಂ  ಉಪಾಧ್ಯಕ್ಷ  ಬಿಳಿ ಚೌಡಯ್ಯ, ಸದಸ್ಯರಾದ ಲಕ್ಷ್ಮಣ, ಅಮಿತ್, ಕಿಶೋರ್ಕುಮಾರ್ , ಸ್ಥಾಯಿ ಸಮಿತಿ ಅಧ್ಯಕ್ಷರಾದ   ಹುಚ್ಚೇಗೌಡ, ಎ.ಬಿ.ನಂಜುಂಡಸ್ವಾಮಿ, ಬಿ.ಡಿ.ಚಂದ್ರೇಗೌಡ ಮತ್ತಿತರರು ಒತ್ತಾಯಿಸಿದರು.
ಸ್ವಚ್ಚತಾ ಆಂದೋಲನದಡಿ ನಿರ್ಮಾಣಗೊಂಡ ಶೌಚಾಲಯಗಳ ಫಲಾನುಭವಿಗಳಿಗೆ ಇನ್ನು ಹಣ ಬಿಡುಗಡೆಯಾಗದಿರುವ ಬಗ್ಗೆ ಸದಸ್ಯರಾದ  ಬಿ.ಡಿ.ಚಂದ್ರೇಗೌಡ ಹಾಗೂ ನಂಜುಂಡಸ್ವಾಮಿ  ಪ್ರಸ್ತಾಪಿಸಿದರೆ,  ಬೇಲೂರು ಸಕಲೇಶಪುರ ಭಾಗಗಳಲ್ಲಿನ  ಬಸ್ಸ್ಂಚಾರ ಅವ್ಯವಸ್ಥೆಯ ನ್ಯೂನತೆಗಳು ಮಲೆನಾಡು ಪ್ರದೇಶದ ಆನೆ ಹಾವಳಿ, ವಿದ್ಯುತ್ಸ್ಂಪರ್ಕ ಮತ್ತು ಪೂರೈಕೆ,ಸಮಸ್ಯೆಗಳ ಬಗ್ಗೆ  ಸದಸ್ಯರಾದ ಸುಲೋಚನಾ ರಾಮಕೃಷ್ಣ ಹಾಗೂ ಇಂದಿರಾ ಧರ್ಮಪ್ಪ ವಿಷಯ ಮಂಡಿಸಿದರು.
ಜಿಪಂ ಅಧ್ಯಕ್ಷೆ ಅಂಬಿಕಾರಾಮಣ್ಣ ಮಾತನಾಡಿ, ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳು ಪ್ರಾಮಾಣಿಕವಾಗಿ ಸ್ಪಂದಿಸಬೇಕು, ಹಂಚಿಕೆ ಮಾಡಿದ ಅನುದಾನ ಸದ್ಭಳಕೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement