ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಾಗೂರು ಮಂಜೇಗೌಡ ಜಿಲ್ಲಾ ನೌಕರ ಸಂಘದ ಅಧ್ಯಕ್ಷ

Rashmi Kasaragodu
Updated On : 12 Aug 2013, 11:22 am

ಹಾಸನ:  ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಬಾಗೂರು ಮಂಜೇಗೌಡ ಸೋಮವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
 ಪ್ರಾದೇಶಿಕ ರಸ್ತೆ ಸಾರಿಗೆ ಇಲಾಖೆ (ಆರ್ಟಿಒ) ಅಧಿಕಾರಿ ಮಂಜೇಗೌಡರಿಗೆ 41 ಮತಗಳು ಬಂದರೆ, ಪ್ರತಿಸ್ಪರ್ಧಿವಿದ್ಯಾನಗರ ಸರ್ಕಾರಿ ಕಾಲೇಜಿನ ಉಪನ್ಯಾಸಕ ಎಚ್.ಟಿ. ಸುರೇಶ್ 29 ಮತ ಪಡೆದರು.
ಖಚಾಂಚಿ ಸ್ಥಾನಕ್ಕೆ ನ್ಯಾಯಾಂಗ ಇಲಾಖೆಯ ಅಣ್ಣೇಗೌಡ 39 ಮತ ಪಡೆದು ಚುನಾಯಿತರಾದರೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಎನ್. ಜಯರಾಂ 29 ಮತ ಪಡೆದು ಪರಾಭವಗೊಂಡರು.
ರಾಜ್ಯ ಪರಿಷತ್ತಿನ ಪ್ರತಿನಿಧಿ ಸ್ಥಾನಕ್ಕೆ ಕೆಜಿಐಡಿ ಇಲಾಖೆಯ ಮನು 45 ಮತಗಳನ್ನು ಪಡೆದು ವಿಜಯಿಯಾದರೆ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಕೃಷ್ಣೇಗೌಡ 24 ಮತ ಪಡೆದು ಸೋತರು.   ಹಣದ ಹೊಳೆ: ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿ ಗೆಲ್ಲಲಾಗಿದೆ. ಇದು ಶಿಕ್ಷಿತ ಸಮುದಾಯಕ್ಕೆ ಎಸಗಿದ ಅಪಮಾನ ಎಂದು ಟೀಕಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement