ಮೆಚ್ಚುಗೆ ಪಡೆದ ದೇಶಭಕ್ತಿ ಗೀತೆ ಗಾಯನ
ಹಾಸನ: ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಐಡಿಯಲ್ ಅಬಾಕಸ್, ಐಪಿಎಎಸ್ಜಿಆರ್ ಅಬಾಕಸ್ ಸೆಂಟರ್, ಐಪಿಎ ವಿಶ್ವಚೇತನ ಅಬಾಕಸ್ ಸೆಂಟರ್, ಐಪಿಎ ವಿಜಯನಗರ ಅಬಾಕಸ್ ಸಂಯುಕ್ತಾಶ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಗೀತಾಭಾರತಿ-2013 'ಅವಾಜ್ ದೋ ಹಮ್ ಏಕ್ ಹೈ' ದೇಶ ಭಕ್ತಿ ಗೀತೆಗಳ ಸಮೂಹ ಗಾಯನ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿ ಹಾಡಿದರು. ಇದು ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.