ರಾಜ್ಯ ಮಟ್ಟಕ್ಕೆ ಆಯ್ಕೆ
ಹಾಸನ: ನಗರ ಜಿ. ಕ್ಲಸ್ಟರ್ ಹಾಗೂ ಸಂಯುಕ್ತ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಯುನೈಟೆಡ್ ಅಕಾಡೆಮಿ ಶಾಲಾ ವಿದ್ಯಾರ್ಥಿಗಳು ಚೆಸ್, ಕ್ರಿಕೆಟ್ ಹಾಗೂ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ, ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಮಾರ್ಗದರ್ಶಕ ಸಿ.ಎಂ.ಚಂದ್ರಶೇಖರ್, ಪ್ರಾಂಶುಪಾಲೆ ಪ್ರತಿಮಾ ಪೊನ್ನಪ್ಪ ಹಾಗೂ ದೈಹಿಕ ಶಿಕ್ಷಕ ಎಚ್.ಎಸ್.ಚಂದನ್ ಹಾಗೂ ಬಿ.ಎಸ್.ಜಯಣ್ಣ ಮತ್ತಿತರರು ಅಭಿನಂದಿಸಿದ್ದಾರೆ.