ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಸತಿಗೃಹ ವಾಸ್ತವ್ಯಕ್ಕೆ ಗುರುತಿನ ಚೀಟಿ ಕಡ್ಡಾಯ: ಎಸ್ಪಿ ರವಿ. ಚನ್ನಣ್ಣನವರ್

Rashmi Kasaragodu
Updated On : 12 Aug 2013, 11:21 am

ಹಾಸನ: ನಗರದಲ್ಲಿ ಯಾವುದೇ ವಸತಿ ಗೃಹಗಳಲ್ಲಿ ಯಾರೇ ತಂಗ ಬೇಕಾದರೂ ಗುರುತಿನ ಚೀಟಿ ಕಡ್ಡಾಯವಾಗಿ ಇರಲೇ ಬೇಕು. ಇಲ್ಲದಿದ್ದರೆ ಕೊಠಡಿ ಬಾಡಿಗೆ ನೀಡಬಾರದು ಎಂದು ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ತಿಳಿಸಿದ್ದಾರೆ.
ಅವರು ಇತ್ತೀಚೆಗೆ ವಸತಿಗೃಹಗಳ ವ್ಯವಸ್ಥಾಪಕರ ಸಭೆ  ನಡೆಸಿ ಮಾತನಾಡಿ, ಕೆಲವು ಆರೋಪಿಗಳು ಅಪರಾಧ ಎಸಗಿ ಲಾಡ್ಜ್ನಲ್ಲಿ ತಂಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿರುವುದರಿಂದ ಇದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
ಈ ನಿಟ್ಟಿಲ್ಲಿ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಲಾಡ್ಜ್ನಲ್ಲಿ ತಂಗ ಬೇಕಾದರೆ ಚುನಾವಣಾ ಗುರುತಿನ ಚೀಟಿ, ಇಲ್ಲವೇ ವಾಹನದ  ಪರವಾನಗಿ , ಆಧಾರ್ಕಾರ್ಡ್  ತೋರಿಸಿದರೆ ಮಾತ್ರ ಬಾಡಿಗೆಗೆ ಕೊಠಡಿ ನೀಡಬೇಕು. ಇಲ್ಲದಿದ್ದರೆ   ಯಾವುದಾದರೂ ದುರಂತ ಹಾಗೂ ಕೃತ್ಯ ನಡೆದರೆ  ಅದಕ್ಕೆ ಲಾಡ್ಜ್ ಮಾಲೀಕರು, ವ್ಯವಸ್ಥಾಪಕರೇ ನೇರ ಹೊಣೆಗಾರರಾಗಬೇಕಾಗುತ್ತದೆ. ಈ ನಿಟ್ಟಿನಲ್ಲಿ  ಇದಕ್ಕೆ ಅವಕಾಶಕೊಡದೆ ಕಟ್ಟು ನಿಟ್ಟಿನ ನಿಯಮಪಾಲಿಸುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement