ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅರಣ್ಯ ಇಲಾಖೆ ದಿನಗೂಲಿ ನೌಕರರ ಧರಣಿ

Rashmi Kasaragodu
Updated On : 14 Aug 2013, 12:09 pm

ಕ.ಪ್ರ.ವಾರ್ತೆ    ಮೈಸೂರು    ಆ. 13
ತಮ್ಮ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ಸರ್ಕಾರಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಹಾಗೂ ಅರಣ್ಯ ಇಲಾಖೆ ಪರಿಶಿಷ್ಟ ಜಾತಿ, ಪಂಗಡ ದಿನಗೂಲಿ ನೌಕರರ ಸಂಘದವರು ಮಂಗಳವಾರ ಪ್ರತಿಭಟಿಸಿದರು.
ಅಶೋಕ ವೃತ್ತದಿಂದ ಮೆರವಣಿಗೆ ಹೊರಟ ದಿನಗೂಲಿ ನೌಕರರು ಅಶೋಕಪುರಂನಲ್ಲಿರುವ ಅರಣ್ಯ ಭವನದ ಎದುರು ಧರಣಿ ನಡೆಸಿದರು.
ಮೈಸೂರು ವೃತ್ತದ ವಿವಿಧ ವಿಭಾಗ ಮತ್ತು ವಲಯಗಳಲ್ಲಿ ಸರ್ಕಾರಿ ಆದೇಶ ಹಾಗೂ ಇಲಾಖೆ ಆದೇಶ ಉಲ್ಲಂಘಿಸಿ ದಿನಗೂಲಿ ನೌಕರರಿಗೆ ಮೋಸ ಮಾಡಲಾಗುತ್ತಿದೆ. ಸೌಲಭ್ಯ ನೀಡದೆ ವಂಚನೆ, ವೇತನದಲ್ಲಿ ಕಡಿತಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮೈಸೂರು ವಿಭಾಗದಲ್ಲಿ ಪಿಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಬ್ಯಾಂಕ್ ಮೂಲಕ ವೇತನ ಪಾವತಿಸಬೇಕು. ಮೈಸೂರು ಸಾಮಾಜಿಕ ಅರಣ್ಯ ವಿಭಾಗದ ನೌಕರರಿಗೆ ಏಪ್ರಿಲ್ನಿಂದ ಬಾಕಿ ಇರುವ ವೇತನ ನೀಡಬೇಕು. ಹಾಗೆಯೆ 9 ತಿಂಗಳಿಂದ ಬಾಕಿ ಇರುವ ಮಳವಳ್ಳಿ ವಲಯದ ನೌಕರರಿಗೆ ವೇತನ ನೀಡಬೇಕು. ಇದೇ ರೀತಿ ವಿವಿಧ ವಿಭಾಗಗಳಲ್ಲಿ ಬಾಕಿಯಿರುವ ನೌಕರರ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.
  ಕಳೆದ ಮೂರು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ನೌಕರರಿಗೆ ನ್ಯಾಯ ಒದಗಿಸುತ್ತಿಲ್ಲ. ಹೀಗಾಗಿ ಮೈಸೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯವರು ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement