ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಟೋಗಳ ಮೇಲೆ ಬರಹ ನಿಷೇಧ: ನಿಯಮ ಪಾಲಿಸದಿದ್ದರೆ ಪರವಾನಗಿ ರದ್ದು

Rashmi Kasaragodu
Updated On : 14 Aug 2013, 12:06 pm

ಸಕಲೇಶಪುರ: ಆಟೋಗಳ ಮೇಲೆ ಇಷ್ಟ ಬಂದ ರೀತಿಯಲ್ಲಿ ಹೆಸರು ಬರೆಸುವ ಹಾಗೂ ಸಾರಿಗೆ ನಿಯಮ ಮುರಿಯುವ ಚಾಲಕರ ಹಾಗೂ ಅಂಥ ವಾಹನಗಳ ಪರವಾನಗಿ ರದ್ದು ಗೊಳಿಸುವಂತಹ ಕಠಿಣ ಕ್ರಮಕ್ಕೆ ಸಾರಿಗೆ ಇಲಾಖೆ ಮುಂದಾಗಿದೆ. ಆಟೋ ತುಂಬಾ ನೂರಾರು ಹೆಸರು ಹತ್ತಾರು ಸ್ಲೋಗನ್ ಬರೆಸಿ ನೋಡುಗರಿಗೆ ಅಸಹ್ಯ ಹಾಗೂ ಆನಂದ ಎರಡನ್ನು ಉಂಟುಮಾಡುತ್ತಿದ್ದ ಆಟೋ ಚಾಲಕರನ್ನು ಆ ರೀತಿ ಬರೆಸಿದರೆ ದಂಡ ಕಟ್ಟಲು ಸಿದ್ದರಾಗಬೇಕು.  ಹೊಗೆ ಉಗುಳುವ ಹಾಗೂ ಚಾಲಕರ ಪರವಾನಗಿ ಇಲ್ಲದೆ ಆಟೋ ಓಡಿಸುವುದು ಕಂಡು ಬಂದರೆ, ಶಾಲಾ  ಮಕ್ಕಳನ್ನು ಸಾಗಿಸುವ ಆಟೋಗಳು ನಿಯಮಕ್ಕಿಂತ ಹೆಚ್ಚಿನ ಮಕ್ಕಳನ್ನು ತುಂಬಿದರೆ ಲೈಸನ್ಸ್ ರದ್ದುಪಡಿಸುವ  ನಿರ್ಧಾರಕ್ಕೆ ಎಆರ್ಟಿಓ ಅಧಿಕಾರಿಗಳು ಬಂದಿದ್ದಾರೆ. ಆಟೋಗಳ ಮೇಲಿನ ಸ್ಲೋಗನ್ನಿಂದ ಸಾಮಾಜಿಕ ವ್ಯವಸ್ಥೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮ ಅರಿತು ಬುಧವಾರದಿಂದ ಆಟೋಗಳ ಮೇಲೆ ಬರೆಸಿರುವ ವಿವಿಧ ನಮೂನೆಯ ಹೆಸರುಗಳನ್ನು ತೆಗೆಸುತ್ತಿರುವುದಲ್ಲದೆ ಸ್ಥಳದಲ್ಲೇ 600 ರು. ದಂಡ ಹಾಕುತ್ತಿದ್ದಾರೆ. ಶಾಲಾ ಮಕ್ಕಳು, ತೋಟದ ಕಾರ್ಮಿಕರನ್ನು ಸಾಗಿಸುವ ಆಟೋ ಚಾಲಕರು ಸಾರಿಗೆ ಇಲಾಖೆ ಸೂಚಿಸುವ ನಿಯಮಗಳನ್ನು ಕಡ್ಡಾಯ ಪಾಲಿಸಬೇಕು. ತಪ್ಪಿದಲ್ಲಿ ಚಾಲನಾ ಪರವಾನಗಿ ರದ್ದುಗೊಳಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement