ಇಂಟರ್ನೆಟ್ ಬಳಕೆ ಬಗ್ಗೆ ಗುಣಾತ್ಮಕ ಶಿಕ್ಷಣ: ರೆಹಮತ್
ಬೇಲೂರು: ಮಕ್ಕಳಿಗೆ ಕಂಪ್ಯೂಟರ್ ಹಾಗೂ ಇಂಟರ್ನೆಟ್ಉಪಯೋಗದ ಬಗ್ಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶವಿದ್ದು, ಆ ಕನಸು ಇಂದು ನನಸಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ರೆಹಮತ್ ಹೇಳಿದರು. ತಾಲೂಕಿನ ಪ್ರಸಾದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಹಾಗೂ ಎಸ್ಡಿಎಂಸಿ ಸಮಿತಿಯವರು 30 ಸಾವಿರ ರು. ಮೌಲ್ಯದ ಕಂಪ್ಯೂಟರ್ಅನ್ನು ಕೊಡುಗೆಯಾಗಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಡುಗೆಯಾಗಿ ನೀಡಿರುವ ಕಂಪ್ಯೂಟರ್ಅನ್ನು ಎಸ್ಎಲ್ಡಿಡಿ ಗ್ರಂಥಾಲಯದಲ್ಲಿ ಅಳವಡಿಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕಂಪ್ಯೂಟರ್ನ ಮಹತ್ವ ಮತ್ತು ಇಂಟರ್ನೆಟ್ ಬಳಕೆ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು ಎಂದರು. ಎಸ್ಡಿಎಂಸಿಯ ಪರಮೇಶ್, ನಾರಾಯಣ್, ಕುಮಾರ್, ಕವಿತ, ಶಾಂತ ಇದ್ದರು. ಸಹ ಶಿಕ್ಷಕ ಮಂಜುನಾಥ್ ವಂದಿಸಿದರು.