ಎನ್ಸಿಸಿಗೆ ವಿದ್ಯಾರ್ಥಿ ಆಯ್ಕೆ ಪ್ರಕ್ರಿಯೆ ಶುರು
ಕ.ಪ್ರ.ವಾರ್ತೆ ಅರಸೀಕೆರೆ ಆ. 13
ಪಟ್ಟಣದ ಹೊಯ್ಸಳೇಶ್ವರ ಪದವಿ ಕಾಲೇಜಿನಲ್ಲಿ 2013-14ನೇ ಸಾಲಿನ ಎನ್.ಸಿ.ಸಿ. ಸೇರಬಯಸುವ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಪ್ರಥಮ ಪಿಯುಸಿ ವಾಣಿಜ್ಯ, ಕಲಾ, ಹಾಗೂ ವಿಜ್ಞಾನ ಪದವಿ ಬಿಎ, ಬಿ.ಕಾಂ, ಬಿಎಸ್ಸಿ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಯಿತು.
ಇದೇ ವೇಳೆ ಕಾಲೇಜು ಎನ್ಸಿಸಿ ಅಧಿಕಾರಿ ಪ್ರಭು ಮಾತನಾಡಿ ಶಾಲಾ ಕಾಲೇಜು ಹಂತಗಳಲ್ಲಿ ಎನ್ಸಿಸಿ ಸೇರಿ ಪ್ರಮಾಣಪತ್ರ ಪಡೆಯುವುದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಸೇರಿದಂತೆ ಇನ್ನಿತರ ಕೋರ್ಸ್ಗಳಿಗೆ ಮೀಸಲಾತಿ ಲಭ್ಯವಿದೆ.
ಅಲ್ಲದೇ ರಾಷ್ಟ್ರೀಯ ವಿಪತ್ತಿನ ವೇಳೆ ಸೇವೆ ಸಲ್ಲಿಸಲು ತರಬೇತಿ ಪಡೆದ ಯುವಕ ಯುವತಿಯರನ್ನು ಸನದ್ಧಗೊಳ್ಳಲು ಇದೊಂದು ಉತ್ತಮ ಅವಕಾಶ. ಆ ಮೂಲಕ ದೇಶಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.