ಗಡಿಯಲ್ಲಿ ಸೈನಿಕರ ಹತ್ಯೆಗೆ ವಿಎಚ್ಪಿ ಖಂಡನೆ
ಸಕಲೇಶಪುರ: ಪೂಂ್ನಲ್ಲಿ ಭಾರತೀಯ ಯೋಧರ ಹತ್ಯೆ ನಡೆಸಿದ ಪಾಕಿಸ್ತಾನದ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಬಿಜೆಪಿ ಹಾಗೂ ವಿಶ್ವಹಿಂದೂ ಪರಿಷತ್ ಮುಖಂಡರು ಆಗ್ರಹಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಪ್ರತ್ಯೇಕವಾಗಿ ತಹಸೀಲ್ದಾರ್ ಅವರಿಗೆ ಈ ಕುರಿತು ಮನವಿ ನೀಡಿ, ಪಾಕಿಸ್ತಾನ ಪದೇ ಪದೇ ಕದನವಿರಾಮ ಉಲ್ಲಂಘಿಸುತ್ತಿದ್ದು ಗಡಿಯಲ್ಲಿರುವ ಅಮಾಯಕ ಸೈನಿಕರ ಹತ್ಯೆ ನಡೆಸುತ್ತಿದೆ. ಇಂಥ ಕೃತ್ಯಗಳು ಪುನರಾವರ್ತನೆ ಆಗುತ್ತಿರುವುದರಿಂದ ಸೈನಿಕರ ಮನೋಬಲ ಕುಗ್ಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ನಿರ್ಧಾರಕ್ಕೆ ಬರುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸ ಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ತಾಲೂಕು ಬಿಜೆಪಿ ಅಧ್ಯಕ್ಷ ಕ್ಯಾಮನಹಳ್ಳಿ ಡಿ.ರಾಜ್ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಬ್ಬನಹಳ್ಳಿ ಸಂದೇಶ್ ಮುಖಂಡ ಮಂಜುನಾಥ್ ಸಾಂಘ್ವಿ, ಸುಧೀರ್ ಮುಂತಾದವರು ಇದ್ದರು.