ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೊಡ್ಡವರೆಲ್ಲ ಜಾಣರಲ್ಲ...

Rashmi Kasaragodu
Updated On : 14 Aug 2013, 12:06 pm

ಕ.ಪ್ರ.ವಾರ್ತೆ    ಹಾಸನ    ಆ. 13
ನಗರದ ಹೃದಯ ಭಾಗದಲ್ಲಿರುವ ಮಹಾರಾಜ ಪಾರ್ಕ್ ಆವರಣದಲ್ಲಿ ಮಕ್ಕಳ ಆಟವಾಡಲೆಂದು ಅಳವಡಿಸಿರುವ ಬಣ್ಣ ಬಣ್ಣದ ಆಟೋಟ ವಸ್ತುಗಳು ಈಗ ಕೇವಲ ದೊಡ್ಡವರ ಆಟಕ್ಕೆ ಮೀಸಲಾದಂತೆ ಕಾಣುತ್ತಿದೆ.
ನಗರಸಭೆ ವತಿಯಿಂದ ಭಾರೀ ವೆಚ್ಚದಲ್ಲಿ ಮಕ್ಕಳಿಗಾಗಿಯೇ ನಾನಾ ರೀತಿಯ ಆಟೋಟ ವಸ್ತುಗಳನ್ನು ಮಹಾರಾಜ ಪಾರ್ಕ್ ಆವರಣದಲ್ಲಿ ನಿರ್ಮಿಸಲಾಗಿದೆ. ಈ ಹಿಂದೆ ಕೂಡಾ ಹೊಸ ರೀತಿಯ ಆಟೋಟ ವಸ್ತುಗಳನ್ನು ನಿರ್ಮಿಸಿದ ಕೆಲ ದಿನಗಳಲ್ಲಿಯೇ ಹಿರಿಯರ ಆಟ ಹೆಚ್ಚಾಗಿ ಈ ವಸ್ತುಗಳು ಹಾಳಾಗಿ ಹೋಯಿತು.
ಸೆಕ್ಯುರಿಟಿ ಇದ್ದರೂ ಯಾವ ಪ್ರಯೋಜನವಾಗಲಿಲ್ಲ. ಮತ್ತೆ ಈಗ ಇನ್ನು ಹೆಚ್ಚಿನ ಆಟೋಟ ವಸ್ತುಗಳು ಬಂದಿದ್ದು, ಯಾವುದೇ ಪ್ರಯೋಜನವಿಲ್ಲ. ಮಕ್ಕಳು ತಮ್ಮ ತಂದೆ ತಾಯಿಯರ ಜತೆಯಲ್ಲಿ ಆಡುವುದಕ್ಕೆ ಬಂದು ಮಕ್ಕಳನ್ನು ನಿಲ್ಲಿಸಿ ದೊಡ್ಡವರು ಆಟವಾಡುವುದು ಕಂಡು ಬರುತ್ತಿದೆ. ಅಲ್ಲದೆ ಕೆಲ ಪುಂಡ ಹುಡುಗರು ಆಗಾಗ್ಗೆ ಬಂದು ಉಪಯೋಗಿಸುವ ಮೂಲಕ ಪಾರ್ಕ್ನಲ್ಲಿ ಅಳವಡಿಸಿರುವ ಆಟದ ವಸ್ತುಗಳನ್ನೆಲ್ಲಾ ಹಾಳು ಮಾಡುತ್ತಿದ್ದಾರೆ. ವಾಯು ವಿಹಾರಕ್ಕೆ ಪ್ರತಿನಿತ್ಯ ಪಾರ್ಕಿಗೆ ಬರುವ ಹಿರಿಯ ನಾಗರಿಕರು ಪ್ರಶ್ನಿಸಲು ಹೋದರೆ ಅವರನ್ನೆ ಗದರಿಸಿ ಕಳುಹಿಸುತ್ತಾರೆ.
ಹೀಗೆ ಮುಂದುವರೆದರೇ ಕೆಲ ತಿಂಗಳಲ್ಲಿ ಹಾಕಲಾಗಿರುವ ನೂತನ ಆಟೋಟ ವಸ್ತುಗಳೆಲ್ಲವನ್ನು ತೂಕಕ್ಕೆ ಹಾಕಬೇಕಾಗುತ್ತದೆ. ನಗರಸಭೆ ಹಾಗೂ ಸಂಬಂಧಪಟ್ಟವರು ಇತ್ತ ಕಡೆ ಗಮನ ನೀಡಿ ಜಾಗರೂಕತೆ ವಹಿಸಿ ಇಬ್ಬರು ಸೆಕ್ಯುರಿಟಿ ನೇಮಿಸಿ, ದೊಡ್ಡವರು ಆಟವಾಡಿದರೆ ದಂಡ ವಿಧಿಸುವುದನ್ನು ತಿಳಿಯುವಂತೆ ದೊಡ್ಡದಾಗಿ ಸೂಚನೆ ಹಾಕುವ ಮೂಲಕ ಮಕ್ಕಳ ಆಟೋಟ ವಸ್ತುಗಳು ಮಕ್ಕಳಿಗೆ ಸಿಗುವಂತಾಗಲಿ ಎಂಬುದು ಸಾರ್ವಜನಿಕರ ಆಶಯ.


ಮಕ್ಕಳು ಆಟವಾಡಲಿ ಎಂದು ಅಷ್ಟೊಂದು ಹಣ ಖರ್ಚು ಮಾಡಿ ನಿರ್ಮಿಸಿರುವುದು ಸಂತಸದ ವಿಷಯ ಒಂದು ಕಡೆಯಾದರೆ, ಪ್ರತಿನಿತ್ಯ ಈ ಸ್ಥಳದಲ್ಲಿ ದೊಡ್ಡವರು ಆಟ ಆಡುರುವುದು ವಿಪರ್ಯಾಸ. ನಾವು ವಾಯು ವಿಹಾರಕ್ಕೆ ಬರುವಾಗ ಇಂತಹ ಸನ್ನಿವೇಶ ನೋಡುತ್ತಿದ್ದೇವೆ. ಸಂಬಂಧಪಟ್ಟವರು ಈ ಆಟೋಟ ವಸ್ತುಗಳನ್ನು ಸಂರಕ್ಷಿಸಿ ಮಕ್ಕಳಿಗೆ ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ.      
ಟಿ ಪುಟ್ಟಮ್ಮ, ಗೃಹಿಣಿ


ಬಿಡುವಿನ ವೇಳೆ ಮಕ್ಕಳು ಕಾಲ ಕಳೆಯಲು ಮಹಾರಾಜ ಪಾರ್ಕ್ ತುಂಬಾ ಅನುಕೂಲವಾಗಿದೆ. ನಗರಸಭೆ ಉತ್ತಮ ಕಾರ್ಯವೇನೊ ಮಾಡಿದೆ. ನೂತನ ಆಟೋಟ ವಸ್ತುಗಳನ್ನು ಸಂರಕ್ಷಿಸಬೇಕಾದ್ದು ನಗರಸಭೆ ಕರ್ತವ್ಯ ಲಭ್ಯವಾಗುವಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ.      
ಟಿ ಲಕ್ಷ್ಮಮ್ಮ, ಗೃಹಿಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement