ಮಡೇನೂರಿನಲ್ಲಿ ಜೈವಿಕ ಡೀಸೆಲ್ ದಿನಾಚರಣೆ
ಹಾಸನ: ತಾಲೂಕಿನ ಮಡೇನೂರಿನಲ್ಲಿರುವ ಜೈವಿಕ ಇಂಧನ ಉದ್ಯಾನದಲ್ಲಿ ಜೈವಿಕ ಡೀಸೆಲ್ ದಿನಾಚರಣೆ ನಡೆಯಿತು. ಉಪ ಪ್ರಧಾನ ನಿರ್ದೇಶಕ ರವಿವಿಪ್ರಭು ಕೃಷಿ ವಿವಿಗೆ ಒಡಂಬಡಿಕೆಗೆ ಪ್ರಸ್ತಾವನೆ ಸಲ್ಲಿಸಿದರು. ಡೀನ್ ಡಾ. ಎಲ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವಾಹನಗಳಿಗೆ ಜೈವಿಕ ಡೀಸೆಲ್ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವೈ.ಬಿ. ರಾಮಕೃಷ್ಣ, ಡಾ. ಬಾಲಕೃಷ್ಣಗೌಡ, ಪ್ರಾಧ್ಯಾಪಕ ಡಾ.ಪ್ರಸನ್ನ, ಜಿ.ಸಿ. ವಿಜಯಕುಮಾರ್, ಮುಖ್ಯಸ್ಥ ಡಾ. ಬಿ.ಸಿ. ಬಸವರಾಜ್, ಡಾ.ಎ.ಸಿ. ಗಿರೀಶ್, ಡಾ.ಸಿ. ಹಾಲೇಶಿ, ಡಾ. ರಘು, ಮೂಕಾಂಬಿಕಾ ಬಯೋಫ್ಯೂಲ್ನ ರವಿಕುಮಾರ್, ಅರಸೀಕೆರೆ, ಹಾಸನ, ಆಲೂರು ಮತ್ತು ಚನ್ನರಾಯಪಟ್ಟಣ ತಾಲೂಕಿನ ರೈತರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.