ರು. 70 ಸಾವಿರ ಮೌಲ್ಯದ ಅಕ್ರಮ ಮರದ ನಾಟಾ ವಶ
ಕ.ಪ್ರ.ವಾರ್ತೆ ಸಕಲೇಶಪುರ ಆ. 13
ಅಕ್ರಮ ಸಾಗಿಸುತ್ತಿದ್ದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಮೊತ್ತದ ನಾಟಗಳನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಹೆಬ್ಬಸಾಲೆ ಸಮೀಪದ ಕೃಷ್ಣಾಪುರ ಜಮೀನು ಸಮೀಪ ನಾಟಗಳನ್ನು ಲಾರಿಗೆ ತುಂಬುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಮಹದೇವ್ ನೇತೃತ್ವದ ತಂಡ ದಾಳಿ ನಡೆಸಿ, ಸುಮಾರು 70 ಸಾವಿರ ರು. ಬೆಲೆಯ ಮರದನಾಟ, ಲಾರಿ ಹಾಗೂ ಇದನ್ನು ತುಂಬಲು ಬಳಸುತ್ತಿದ್ದ ಕ್ರೇನ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.