ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೀರಶೈವ ಧರ್ಮದಲ್ಲಿ ಸಮಾನತೆ: ಶಿವಾನಂದ ಶಿವಾಚಾರ್ಯ ಸ್ವಾಮೀಜಿ

Rashmi Kasaragodu
Updated On : 14 Aug 2013, 12:08 pm

ಹಾಸನ: ವೀರಶೈವ ಧರ್ಮದಲ್ಲಿ ಸಮಾನತೆ ಕಾಣಬಹುದು ಎಂದು ಎಂದು ತುಮಕೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ನಗರದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ವೀರಶೈವ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶ್ರಾವಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ವೀರಶೈವರು ಧರ್ಮದಲ್ಲಿ ಎಲ್ಲರೂ ಸಮಾನರು ಎಂಬ ಮನೋಭಾವನೆ ಹೊಂದಿದ್ದಾರೆ. ಸಮಾಜದ ಪ್ರಗತಿಯ ಬಗ್ಗೆ ಚಿಂತನೆ ನಡೆಸಬೇಕು ಎಂದು ಸಲಹೆ ನೀಡಿದರು.
   ಶ್ರಾವಣ ಮಾಸಾಚರಣೆಯ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಆ.12 ರಿಂದ ಸೆ.9 ರವರೆಗೆ ಪ್ರತಿ ಸೋಮವಾರ ಬೆಳಗ್ಗೆ 9  ರಿಂದ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ದೇವತಾಮೂರ್ತಿಗಳಿಗೆ ರುದ್ರಾಭಿಷೇಕ, ವಿಶೇಷಪೂಜೆ ಹಾಗೂ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮ ವೀರಶೈವ ಸಂಘದ ವತಿಯಿಂದ ನೆರವೇರುತ್ತದೆ. ನಂತರ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಗುವುದು.
 ವೀರಶೈವ ಸಂಘದ ಅಧ್ಯಕ್ಷ  ಬಿ.ಪಿ. ಐಸಾಮಿಗೌಡ ಅಧ್ಯಕ್ಷತೆ ವಹಿಸಿದ್ದರು. ಬಿ.ಎಂ. ಭುವನಾಕ್ಷ, ವಿಶ್ವ ಕಟ್ಟಾಯ ಶಿವಕುಮಾರ್, ವೀರಶೈವ ಸಂಘದ ನಿರ್ದೇಶಕ ಕೀರ್ತಿಕುಮಾರ್, ಮಾಜಿ ನಗರಸಭೆ ಸದಸ್ಯೆ ಅನ್ನಪೂರ್ಣಮ್ಮ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement