ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'3 ವರ್ಷ ಶ್ರಮವಹಿಸಿ ಓದಿದರೆ 30 ವರ್ಷ ಫಲ'

Rashmi Kasaragodu
Updated On : 15 Aug 2013, 12:28 pm

ಕ.ಪ್ರ.ವಾರ್ತೆ  ಮೈಸೂರು  ಆ. 14
ಪದವಿ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗಳ ಪ್ರಮುಖವಾದ ಘಟ್ಟ. ಮೂರು ವರ್ಷ ಶ್ರದ್ಧೆ, ಪ್ರಾಮಾಣಿಕತೆಯಿಂದ ಶ್ರಮವಹಿಸಿ ಓದಿದರೇ 30 ವರ್ಷದ ಅದರ ಫಲ ಅನುಭವಿಸಬಹುದು ಎಂದು ಮೈಸೂರು ವಿವಿ ಕುಲಸಚಿವ ಪ್ರೊ. ಸಿ. ಬಸವರಾಜು ತಿಳಿಸಿದರು.
ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಕಾಲೇಜು ಮತ್ತು ಪಿಯು ಕಾಲೇಜು ವಿದ್ಯಾರ್ಥಿ ಸಂಘವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮೂರು ವರ್ಷ ಓದುವ ಬದಲು ಮೋಜು ಮಾಡಿದರೆ 30 ವರ್ಷ ನರಳಬೇಕಾಗುತ್ತದೆ ಎಂದರು.
ಜಾತಿರಹಿತ ಸಮಾಜ ಕಟ್ಟಬೇಕು. ದೇಶದ ಸಂಪತ್ತು ಪ್ರತಿಯೊಬ್ಬರಿಗೂ ಸರಿಸಮಾನವಾಗಿ ಹಂಚಿಕೆ ಆಗಬೇಕು. ಇಷ್ಟು ವರ್ಷಗಳಾದರೂ ಭಾರತ ಸಂವಿಧಾನದ ಆಶಯ ಇನ್ನೂ ಈಡೇರಿಲ್ಲ. ಜಾತಿ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಜೀವಂತವಾಗಿದೆ. ಇವೆಲ್ಲದಕ್ಕೂ ಶಿಕ್ಷಣವೊಂದೆ ಪರಿಹಾರ. ಸಾಮಾಜಿಕ ಸಮಸ್ಯೆಗಳನ್ನು ಶಿಕ್ಷಣದಿಂದ ಪರಿಹಾರ ಸಾಧ್ಯ ಎಂದು ಹೇಳಿದರು.
ಇದೇ ವೇಳೆ ಹಂಸಧ್ವನಿ ವಾರ್ಷಿಕ ಸಂಚಿಕೆಯನ್ನು ಪ್ರೊ. ಸಿ. ಬಸವರಾಜು ಬಿಡುಗಡೆಗೊಳಿಸಿದರು. ಪದವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಗೀನಾ ತಮ್ಮಯ್ಯ, ಉಪಾಧ್ಯಕ್ಷರಾದ ಪಿ. ಶ್ರಾವಿ, ಮೋನಿಕಾ, ಕಾರ್ಯದರ್ಶಿ ಕೆ.ಪಿ. ಶ್ಯಾಮ, ಜಂಟಿ ಕಾರ್ಯದರ್ಶಿಗಳಾದ ಎಂ.ಪಿ. ಅನುಶ್ರೀ, ಭಾರ್ಗವಿ, ಪಿಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ರಕ್ಷಾ ನಾಗೇಶ್, ಉಪಾಧ್ಯಕ್ಷೆ ಎಸ್. ಅಂಬಿಕಾ, ಕಾರ್ಯದರ್ಶಿ ಜೆಸ್ಟಿ ಫ್ರಾನ್ಸಿಸ್ ಮತ್ತು ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಎಂಎಂಕೆ- ಎಸ್‌ಡಿಎಂ ಮಹಿಳಾ ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ವಿ. ದಾಮೋದರ ಗೌಡ, ಪಿಯು ಕಾಲೇಜು ಪ್ರಾಂಶುಪಾಲೆ ಎಂ.ವಿ. ಆಶಾ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳಾದ ಡಾ.ಸಿ.ವೈ. ಕವಿತಾ, ಟಿ.ಆರ್. ವಿಜಯಲಕ್ಷ್ಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement