ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಯ್ಯಪ್ಪ ಅರೋಲಿ ಅಗಲಿಕೆಗೆ ಸಂತಾಪ

Rashmi Kasaragodu
Updated On : 15 Aug 2013, 12:26 pm

ಸಕಲೇಶಪುರ: ರಾಯಚೂರಿನ ಅಯ್ಯಪ್ಪ ಅರೋಲಿ ಅಕಾಲಿಕ ಮರಣದಿಂದ ಇಡೀ ರಾಜ್ಯದ ದಲಿತ ಚಳುವಳಿ ಕಾರ್ಯಕರ್ತರಿಗೆ ತುಂಬಾ ನೋವಾಗಿದೆ ಎಂದು ಜಿಲ್ಲಾ ಸಂಚಾಲಕ ಜಗದೀಶ್ ಹಾಡ್ಲಹಳ್ಳಿ ಸಂತಾಪದಲ್ಲಿ ತಿಳಿಸಿದ್ದಾರೆ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ, ದೇವನೂರು ಮಹದೇವ ಡಾ. ಸಿದ್ದಲಿಂಗಯ್ಯ ತದನಂತರದಲ್ಲಿ ಬಂದ ರಾಜ್ಯ ಸಂಚಾಲಕ ಚಂದ್ರಪ್ರಸಾದ್ ತ್ಯಾಗಿ ಲಕ್ಷ್ಮಿನಾರಾಯಣ್ ಬಾಗಾವರ್ ಅವರ ಸಾರಥ್ಯದ ದಲಿತ ಚಳವಳಿಯಲ್ಲಿ ಭಾಗವಹಿಸಿ ನಿರಂತರವಾಗಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ರಾಜ್ಯ ಸಮಿತಿಯ ಪದಾಧಿಕಾರಿಗಳಿಗೆ ಶಕ್ತಿಯಾಗಿ ಸ್ನೇಹಜೀವಿಯಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆ
ಹಾಸನ: ಕನ್ನಬಾಂಡಿಯಮ್ಮ ಮತ್ತು ಕೆಂಚಮ್ಮ ಟ್ರಸ್ಟ್ ನೂತನ ಅಧ್ಯಕ್ಷ ಎಚ್.ಎಲ್. ಸುಕುಮಾರ್ ಅಧ್ಯಕ್ಷತೆಯಲ್ಲಿ ಗಾಣಿಗರ ಶಿವಜ್ಯೋತಿ ಸಮುದಾಯ ಭವನದಲ್ಲಿ ಸರ್ವ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಿ, ಆ. 30 ರಂದು ಕನ್ನಬಾಂಡಿಯಮ್ಮ ಮತ್ತು ಕೆಂಚಮ್ಮ ದೇವರ ಅದ್ದೂರಿ ಉತ್ಸವ, ಆ. 31 ರಂದು ಪ್ರತಿಭಾ ಪುರಸ್ಕಾರವನ್ನು ಜನಾಂಗದ ನಾಯಕ ಭಾವನಾ ಚಾರಿಟಬಲ್ ಟ್ರಸ್ಟ್‌ನ ಎನ್. ಶ್ರೀನಿವಾಸ್ ಅವರನ್ನು ಸನ್ಮಾನಿಸುವುದು ಸೇರಿದಂತೆ ಅನ್ನಸಂತರ್ಪಣೆ ಕಾರ್ಯ ಹಮ್ಮಿಕೊಳ್ಳಲಾಗುವುದೆಂದು  ಪ್ರಧಾನ ಕಾರ್ಯದರ್ಶಿ ಎಚ್.ಆರ್. ರವಿಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement