ಅರಕಲಗೂಡು: ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ
ಅರಕಲಗೂಡು: 67ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಆ.15ರಂದು ರಾಜ್ಯ ಮಟ್ಟದ ಗ್ರಾಮೀಣ ಕ್ರೀಡಾಕೂಟ ಏರ್ಪಡಿಸಲಾಗಿದೆ.ಪಟ್ಟಣದ ಈಲ್ಡರ್ಸ್ ಸ್ಟೋರ್ಟ್ಸ್ ಕ್ಲಬ್, ವಿದ್ವಾನ್ ಆರ್.ಕೆ. ಪದ್ಮನಾಭ ಅಭಿಮಾನಿಗಳ ಬಳಗ ಹಾಗೂ ಭುವನೇಶ್ವರಿ ಮಹಿಳಾ ಸೇವಾ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಬೆಳಿಗ್ಗೆ 10 ಗಂಟೆಗೆ ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ಹಾಗೂ ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಎಲ್ಲಾ ಸ್ಪರ್ಧೆಗಳಲ್ಲೂ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗಗಳಿವೆ. ಕ್ರೀಡಾಕೂಟ ಕೆ.ಎಸ್.ಆರ್.ಟಿ.ಸಿ ಬೈಪಾಸ್ ರಸ್ತೆ ಬಳಿಯಿರುವ ಗದ್ದೆಯಲ್ಲಿ ನಡೆಯಲಿದೆ.
ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಂಗೀತ ಗೋಷ್ಠಿ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ್ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸುವರು. ಸಂಜೆ ಕಾರ್ಯಕ್ರಮ ಕೋಟೆ ಗಣಪತಿ ಕೊತ್ತಲು ಉದ್ಯಾನವನದಲ್ಲಿ ನಡೆಯಲಿದೆ.
ಇಂದು ಸ್ವಾತಂತ್ರ್ಯ ಓಟ
ಅರಕಲಗೂಡು: 67ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸ್ವಾತಂತ್ರ್ಯ ಓಟ ಕಾರ್ಯಕ್ರಮ ಆಯೋಜಿಸಿದ್ದು, ಇಲ್ಲಿನ ಅ.ನ.ಕೃ ವೃತ್ತದಿಂದ ಬೈಚನಹಳ್ಳಿ ಬಸ್ ನಿಲ್ದಾಣದವರೆಗೆ ಓಟ ಸಾಗಲಿದೆ. ಆಸಕ್ತ ಪುರುಷ-ಮಹಿಳೆಯರು ಪಾಲ್ಗೊಳ್ಳಬಹುದಾಗಿದೆ.
ಇಂದು ರಕ್ತದಾನ ಶಿಬಿರ
ಅರಕಲಗೂಡು: 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಟ್ಟಣದ ಕ್ರಿಸ್ತಜ್ಯೋತಿ ಶಾಲೆ, ಸರ್ಕಾರಿ ರಕ್ತನಿಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಚಾಮರಾಜೇಂದ್ರ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಶಾಸಕ ಎ. ಮಂಜು ಶಿಬಿರ ಉದ್ಘಾಟಿಸುವರು.
ಬಿಎಸ್ಪಿ ಪದಾಧಕಾರಿಗಳ ಆಯ್ಕೆ
ಅರಕಲಗೂಡು: ಬಹುಜನ ಸಮಾಜ ಪಾರ್ಟಿಯ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಯಾಗಿದಉ್ದಾರೆ.
ತಾಲೂಕು ಸಂಯೋಜಕರಾಗಿ ಚಿನ್ನಸ್ವಾಮಿ, ಅಧ್ಯಕ್ಷರಾಗಿ ಮಹೇಶ, ಉಪಾಧ್ಯಕ್ಷರಾಗಿ ಚನ್ನಕೇಶವ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಸಿ. ರಮೇಶ್ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ರಾಜು, ಕಾರ್ಯಾಲಯ ಕಾರ್ಯದರ್ಶಿಯಾಗಿ ಮೋಹನ್ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಸಂಯೋಜಕ ಬಿ.ಸಿ. ರಾಜೇಶ್ ಅವರು ತಿಳಿಸಿದ್ದಾರೆ.
ಸಾಣೇನಹಳ್ಳಿ ಗ್ರಾಮದ ಯುವತಿ ನಾಪತ್ತೆ
ಬೇಲೂರು: ತಾಲೂಕಿನ ಹಳೇಬೀಡು ಹೋಬಳಿ, ಸಾಣೇನಹಳ್ಳಿ ಗ್ರಾಮದ ಬಸವರಾಜು ರವರ ಪುತ್ರಿ ಶೀಲಾ(21) ಮನೆಯಿಂದ ಹೊರಗೆ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಚಹರೆ 4.5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಕಪ್ಪು ಚೂಡಿದಾರ ಧರಿಸಿದ್ದಳು. ತಂಗಿ ಪೂಜಾ ರವರು ಹಳೇಬೀಡು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.