ಎತ್ತಿನಹೊಳೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ: ಎಡಿಸಿ ಗೋಪಾಲಕೃಷ್ಣ
ಕ.ಪ್ರ.ವಾರ್ತೆ ಸಕಲೇಶಪುರ ಆ.15
ತಾಲೂಕಿನ ಹತ್ತು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಎತ್ತಿನಹೊಳೆ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಹೇಳಿದ್ದಾರೆ.
ತಾಲೂಕಿನ ಅಲುವಳ್ಳಿ ಗ್ರಾಮ ಸಮೀಪದ ಸೇತುವೆ ಈ ಬಾರಿ ಅತಿವೃಷ್ಟಿಗೆ ತುತ್ತಾಗಿ ಶಿಥಿಲಗೊಂಡಿರುವುದನ್ನು ಪರಿಶೀಲನೆ ನಡೆಸಿದ ನಂತರ ಗ್ರಾಮಸ್ಥರೊಂದಿಗೆ ಮಾತನಾಡಿ, ಶಿಥಿಲಗೊಂಡಿರುವ ಸೇತುವೆ ದುರಸ್ತಿ ಕಾರ್ಯ ಅಸಾಧ್ಯವಾಗಿದ್ದು, ನೂತನವಾಗಿ ಸೇತುವೆ ನಿರ್ಮಿಸ ಬೇಕಾಗಿದೆ. ಆದ್ದರಿಂದ ಸುಮಾರು ಎರಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ ಬೇಕಾಗಿರುವ ಈ ಸೇತುವೆಯನ್ನು ಜಿಲ್ಲಾಡಳಿತದ ಅನುದಾನದಿಂದ ನಿರ್ಮಿಸಲು ಅಸಾಧ್ಯ. ಆದ್ದರಿಂದ ಈ ಸೇತುವೆ ನಿರ್ಮಾಣದ ತುರ್ತು ಅಗತ್ಯವನ್ನು ಸರಕಾರದ ಗಮನಕ್ಕೆ ತಂದು ಹೊಸ ಸೇತುವೆ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಧಿಕಾರಿ ಶ್ರೀವಿದ್ಯಾ ಇದ್ದರು.