ಟ್ಯಾಂಕ್ ನಿರ್ಮಾಣ: ಸ್ಥಳ ಗುರುತಿಸಲು ಡಿಸಿ ಸೂಚನೆ
ಹಾಸನ: ನಗರಸಭೆ ವಾರ್ಡ್ ಸಂಖ್ಯೆ 1, 34 ಮತ್ತು 35 ರ ದೇವಮ್ಮ ಬಡಾವಣೆ, ಚನ್ನಪಟ್ಟಣ, ಕೆ.ಹೊಸಕೊಪ್ಪಲು, ಎಂ.ಹೊಸಕೊಪ್ಪಲು ಬೊಮ್ಮನಾಯಕನಹಳ್ಳಿ ಮತ್ತು ದೊಡ್ಡಬಸವನಹಳ್ಳಿ ಪ್ರದೇಶಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಕೆಎಂಆರ್ಪಿ ಯೋಜನೆಯಡಿ ಓವರ್ಹೆಡ್ ಟ್ಯಾಂಕ್ ನಿರ್ಮಿಸಲು ಸೂಕ್ತ ಸ್ಥಳ ಗುರುತಿಸುವಂತೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ನಗರಸಭೆ ಆಯುಕ್ತರಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಣದಲ್ಲಿ ನಡೆದ ಕೆಎಂಆರ್ಪಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರದ ರಾಮನಕಟ್ಟೆ ಹಳ್ಳದಲ್ಲಿ ಮಳೆಗಾಲದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸುವುದರಿಂದ ರಾಮನಕಟ್ಟೆ ಹಳ್ಳದ ವೈದೀಕ ಭವನದಿಂದ ಹೌಸಿಂಗ್ ಬೋರ್ಡ್ ಮೇನ್ ಡ್ರೇನ್ವರೆಗೆ ಮಳೆ ನೀರು ಚರಂಡಿ ನಿರ್ಮಿಸಲು ಅಂದಾಜು ಪಟ್ಟಿ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹಾಸನ ನಗರದ ಹಳೇ ತಾಲೂಕು ಕಚೇರಿ ರಸ್ತೆಯ 800 ಮೀ ನಿಂದ 1400 ಮೀ ವರೆಗಿನ ಭಾಗದ ರಸ್ತೆಯನ್ನು 7 ಮೀ ನಿಂದ 10 ಮೀ ವರೆಗೆ ಅಗಲೀಕರಣಗೊಳಿಸಲು ಹೆಚ್ಚುವರಿ ಪರಿಮಾಣಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಹಾಗೆಯೇ ನಗರದ ಕಸವನ್ನು ಪ್ರತಿ ದಿನ ನಿಗದಿತ ಸ್ಥಳಕ್ಕೆ ವಿಲೇವಾರಿ ಮಾಡಲು ಕ್ರಮ ವಹಿಸುವ ಮೂಲಕ ನಗರದಲ್ಲಿ ಸ್ವಚ್ಚತೆ ಕಾಪಾಡಲು ನಿಗಾ ವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಶಾಸಕ ಎಚ್.ಎಸ್.ಪ್ರಕಾಶ್ ಮಾತನಾಡಿ, ನಗರದ ಸ್ವಚ್ಚತೆ ಬಗ್ಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಮಚಂದ್ರನ್, ನಗರಸಭೆ ಆಯುಕ್ತ ನಾಗಭೂಷಣ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್ ಅಧಿಕಾರಿಗಳು ಮೊದಲಾದವರು ಇದ್ದರು.
ಎಂ.ಆರ್.ಪುಟ್ಟೇಗೌಡ ಅಧ್ಯಕ್ಷರಾಗಿ ನೇಮಕ
ಹೊಳೆನರಸೀಪುರ: ಮಾನವ ಹಕ್ಕುಗಳು ಹಾಗೂ ಭ್ರಷ್ಟಾ ಚಾರ ನಿಮೂ ರ್ಲನಾ ಸಂಸ್ಥೆಯ ಹಾಸನ ಜಿಲ್ಲಾ ಅಧ್ಯಕ್ಷ ರನ್ನಾಗಿ ತಾಲೂಕಿನ ಕಟ್ಟೇಹೊಸಹಳ್ಳಿಯ ಎಂ.ಆರ್.ಪುಟ್ಟೇಗೌಡ ಅವರನ್ನು ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ಮೋಹನ್ರಾವ್ ನಾವಡೆ ಅವರು ನೇಮಿಸಿದ್ದಾರೆ.
ಸಂಸ್ಥೆಯ ರಾಜ್ಯಾಧ್ಯಕ್ಷ ಕಟ್ಟೇಹೊಸಹಳ್ಳಿ ಪುಟ್ಟೇಗೌಡ ಅವರಿಗೆ ಪತ್ರ ನೀಡಿದ್ದು, ಇವರ ಅಧಿಕಾರದ ಅವಧಿಯು ಮೇ.30.2015ರವರೆಗೆ ನೀಡಲಾಗಿದೆ. ಕಳೆದ 30 ವರ್ಷಗಳಿಂದಲೂ ತಾಲೂಕು ಹಾಗೂ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡಿರುವ ಪುಟ್ಟೇಗೌಡ ಹಾಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾಗಿದ್ದಾರೆ.
ಜಿಲ್ಲೆ ಹಾಗೂ ತಾಲೂಕಿನ ಕಾಂಗ್ರೆಸ್ ವಲಯದಲ್ಲಿ ದಿ.ಜಿ.ಪುಟ್ಟಸ್ವಾಮಿಗೌಡ, ದಿ.ಎಚ್.ಸಿ.ಶ್ರೀಕಂಠಯ್ಯ, ಬಿ.ಶಿವರಾಂ, ಎಸ್.ಎಂ.ಆನಂದ್ ಮೊದಲಾದ ನಾಯಕರೊಂದಿಗೆ ಗುರುತಿಸಿಕೊಂಡಿರುವುದಲ್ಲದೇ, ಹಲವು ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿರುವ ಪುಟ್ಟೇಗೌಡ ಅವರನ್ನು ಮೇಲ್ಕಂಡ ಸಂಸ್ಥೆಯ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಜಿಲ್ಲಾ ಉಪಾಧ್ಯಕ್ಷರನ್ನಾಗಿ ಅರಕಲಗೂಡು ರಾಜಶೇಖರ್ ಅವರನ್ನು ನೇಮಿಸಲಾಗಿದೆ.