ಸನ್ಮಾನಿತರಾಗುವವರು...
ಹಾಸನ: ನಗರದ ಕ್ರೀಡಾಂಗಣದಲ್ಲಿ 15ರಂದು ನಡೆಯುವ ಸ್ವಾತಂತ್ರ್ಯೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಆರ್.ವೆಂಕಟಸುಬ್ಬು(ಕಸ್ತೂರಿ), ಎಂ.ಶ್ರೀನಿವಾಸ ಅಯ್ಯಂಗಾರ್, ಮತ್ತು ಪಿ.ಎಸ್.ಶಂಕರ ನಾರಾಯಣ ಅವರನ್ನು ಸನ್ಮಾನಿಸಲಾಗುವುದು. 2013ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಚಿಕ್ಕಹೊನ್ನೇನಹಳ್ಳಿಯ ವಿಜಯ ಪ್ರೌಢಶಾಲೆಯ ಹೃತ್ವಿಕ್, 2ನೇ ಪಿಯುಸಿ ವಿಜ್ಞಾನದಲ್ಲಿ ಅರಸೀಕೆರೆಯ ಕೋಡಿ ಮಠ ಪಪೂ ಕಾಲೇಜಿನ ವೀಣಾ ಎಚ್.ಎ., ಕಲಾ ವಿಭಾಗದಲ್ಲಿ ಹೊಳೆನರಸೀಪುರ ತಾ. ಹರಿಹರಪುರ ಸರ್ಕಾರಿ ಪಪೂ ಕಾಲೇಜಿನ ಪ್ರವೀಣಕುಮಾರ್.ಎಸ್.ಎಂ., ವಾಣಿಜ್ಯ ವಿಭಾಗದಲ್ಲಿ ನಗರದ ಎಂ.ಕೃಷ್ಣ ಪದವಿ ಪೂರ್ವ ಕಾಲೇಜಿನ ಸೃಜನ್ ಎನ್. ಮತ್ತು ಅಂತಿಮ ಪದವಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ನಗರದ ಎ.ವಿ.ಕೆ.ಕಾಲೇಜಿನ ಚೈತ್ರ ಎಂ.ಎಲ್., ಕಲಾ ವಿಭಾಗದಲ್ಲಿ ಹೊಳೆನರಸೀಪುರ ಸರ್ಕಾರಿ ಮಹಿಳಾ ಕಾಲೇಜಿನ ಕಾಂತಾಮಣಿ ಎಚ್.ಡಿ., ಮತ್ತು ವಾಣಿಜ್ಯ ವಿಭಾಗದಲ್ಲಿ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶ್ರೀಲಕ್ಷ್ಮಿ ಅವರನ್ನು ಸನ್ಮಾನಿಸಲಾಗುವುದು. ಕ್ರೀಡಾ ವಿಭಾಗದಲ್ಲಿ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಎಚ್.ಕೆ.ಪುಷ್ಪ , ರಾಷ್ಟ್ರೀಯ ಈಜು ಕ್ರೀಡಾ ಪಟು ಸೋನಿಕಾ ಎಂ.ರಾಜ್, ಅಂತಾರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಪಟು ಗಂಗಮ್ಮ, ಮತ್ತು ನೆಟ್‌ಬಾಲ್ ಪಂದ್ಯಾವಳಿಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ನಗರದ ವಿಜಯ ಇಂಗ್ಲಿಷ್ ಮಾಧ್ಯಮ ಶಾಲೆಯ ಎಚ್.ಆರ್.ಉಷಾ, ಎ.ಬಿ.ಐಶ್ವರ್ಯ, ಭೂಮಿಕಾ, ವರ್ಷಿಣಿ, ದೀಕ್ಷಿತ್, ಎಚ್.ಎಂ. ಯಶವಂತ ಕುಮಾರ್, ಎಚ್.ಡಿ. ರಕ್ಷಿತ್‌ಗೌಡ, ಎಚ್.ಎಂ.ಚಂದನ್‌ಗೌಡ. ಜೆ.ಪುನೀತ್‌ಗೌಡ, ವೈ.ಎ.ಮನೋಜ್, ಎಚ್.ಆರ್. ಆಕಾಶ್, ಅರವಿಂದ ಪ್ರೌಢಶಾಲೆಯ ಎಂ.ಶರ್ಮಿಲಾ ಅವರನ್ನು ಸನ್ಮಾನಿಸಲಾಗುವುದು. ಅತ್ಯುತ್ತಮ ಸೇವೆ ಸಲ್ಲಿಸಿರುವ ಹಿರಿಸಾವೆ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಪ್ರೇಮರಾಜ್ , ಹಾಸನ ನಗರಸಭೆ ಪೌರ ಕಾರ್ಮಿಕ ಗೋವಿಂದರಾಜು , ಪತ್ರಿಕಾ ಕ್ಷೇತ್ರದಿಂದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಹಾಸನ ವರದಿಗಾರ ಬಿ.ಆರ್.ಉದಯಕುಮಾರ್, ಎನ್.ಸಿ.ಸಿ.ವಿಭಾಗದಿಂದ ನಗರದ ಸರ್ಕಾರಿ ಕಲಾ ಕಾಲೇಜಿನ ಕಿಶೋರ್‌ಕುಮಾರ್, ಕಿರಣಕುಮಾರ್, ಸರ್ಕಾರಿ ವಿಜ್ಞಾನ ಕಾಲೇಜಿನ ಡಿ.ಆರ್. ಸುನೀಲ್ , ಭಾರತ ಸ್ಕೌಟ್ಸ್ ವಿಭಾಗದಲ್ಲಿ ನಗರದ ಓಪನ್ ಗೈಡ್ಸ್ ಕಂಪನಿ, ಬಿ.ಕಾಟೀಹಳ್ಳಿ ಕೊಪ್ಪಲಿನ ಶಾಲಿನಿ ಕೆ.ಕೆ.ನೀರಜ(ರಾಷ್ಟ್ರಪತಿ ಗೈಡ್), ಹಾಗೂ ಭಾರತ ಸೇವಾ ದಳದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಜಯ್ ಅವರನ್ನು ಸನ್ಮಾನಿಸಲಾಗುವುದು ಎಂದು ಜಿಲ್ಲಾ ಸ್ವಾತಂತ್ರ್ಯೋತ್ಸವ ಸನ್ಮಾನ ಸಮಿತಿ ಅಧ್ಯಕ್ಷರು ಹಾಗೂ ಉಪವಿಭಾಗಾಧಿಕಾರಿ ತಿಳಿಸಿದ್ದಾರೆ.